ADVERTISEMENT

ಅಡಿಕೆ, ಕಾಳುಮೆಣಸಿಗೆ ಕೊಳೆರೋಗ: ಪರಿಹಾರಕ್ಕೆ ಒತ್ತಾಯಿಸಿ ರೈತರ ಬೃಹತ್ ಸಭೆ 

ರೋಗ ತಡೆಗಟ್ಟಲು ನಿರ್ದಿಷ್ಟ ಔಷಧ ಕಂಡುಹಿಡಿಯವಲ್ಲಿ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ವಿಫಲ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 6:26 IST
Last Updated 1 ಸೆಪ್ಟೆಂಬರ್ 2018, 6:26 IST
ಸಭೆಯಲ್ಲಿ ಭಾಗವಹಿಸಿದ್ದ ರೈತರು.
ಸಭೆಯಲ್ಲಿ ಭಾಗವಹಿಸಿದ್ದ ರೈತರು.   

ಶಿರಸಿ:ಅಡಿಕೆ, ಕಾಳುಮೆಣಸು ಬೆಳೆಗೆ ತಗುಲಿದ ಕೊಳೆರೋಗಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ರೈತರ ಬೃಹತ್ ಸಭೆ ಶನಿವಾರ ನಡೆಯಿತು.

ಕೊಳೆರೋಗ ಬಂದು ಅಡಿಕೆ ಬೆಳೆ ಕೈ ಕಚ್ಚಿದೆ, ಕಾಳುಮೆಣಸು ಬಳ್ಳಿ ಇನ್ನು 4-5 ವರ್ಷ ಬೆಳೆ ಬರದಷ್ಟು ಸೊರಗಿದೆ ಎಂದು ರೈತರು ಅಭಿಪ್ರಾಯಪಟ್ಟರು.

ವಿಜ್ಞಾನಿಗಳು ವಿಫಲ

ADVERTISEMENT

ತೋಟಗಾರಿಕಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಡಿಕೆಗೆ ಬಂದಿರುವ ರೋಗ ತಡೆಗಟ್ಟಲು ನಿರ್ದಿಷ್ಟ ಔಷಧ ಕಂಡುಹಿಡಿಯಲು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಟಿಎಸ್ ಎಸ್ ಅಧ್ಯಕ್ಷ ಶಾಂತಾರಾಮ‌ ಹೆಗಡೆ, ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭಾಸ್ಕರ ಹೆಗಡೆ, ಪ್ರಮುಖರಾದ ಜಿ.ಎನ್. ಹೆಗಡೆ, ಭೀಮಣ್ಣ ನಾಯ್ಕ ಉಪಸ್ಥಿತರಿದ್ದರು.

ಸಭೆಯ ನಂತರ ರೈತರು ಮೆರವಣಿಗೆಯಲ್ಲಿ ಸಾಗಿ ಉಪವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ. ಎಲ್ಲ ಪ್ರಮುಖ ಪಕ್ಷಗಳ ಮುಖಂಡರು ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.