ADVERTISEMENT

ಕಲಾವಿದ ಕಲೆಯ ಹದ ಅರಿಯಲಿ: ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 4:58 IST
Last Updated 1 ಸೆಪ್ಟೆಂಬರ್ 2025, 4:58 IST
ಶಿರಸಿಯ ಸ್ವರ್ಣವಲ್ಲೀಯಲ್ಲಿ ನಡೆದ ಯಕ್ಷೋತ್ಸವದಲ್ಲಿ ಎಂ.ಎ.ಹೆಗಡೆ ದಂಟಕಲ್ ಪ್ರಶಸ್ತಿಯನ್ನು ಹಿರಿಯ ಕಲಾವಿದ ಮೃತ್ಯುಂಜಯ ಗಿಂಡಿಮನೆ ದಂಪತಿಗೆ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಪ್ರದಾನ ಮಾಡಿದರು
ಶಿರಸಿಯ ಸ್ವರ್ಣವಲ್ಲೀಯಲ್ಲಿ ನಡೆದ ಯಕ್ಷೋತ್ಸವದಲ್ಲಿ ಎಂ.ಎ.ಹೆಗಡೆ ದಂಟಕಲ್ ಪ್ರಶಸ್ತಿಯನ್ನು ಹಿರಿಯ ಕಲಾವಿದ ಮೃತ್ಯುಂಜಯ ಗಿಂಡಿಮನೆ ದಂಪತಿಗೆ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಪ್ರದಾನ ಮಾಡಿದರು   

ಶಿರಸಿ: ಯಾವುದೇ ಕಲೆಯಿರಲಿ ಅದರ ಹದವರಿತ ಕಲಾವಿದ ಕಲೆಯ ಇತಿಹಾಸದಲ್ಲಿ ಶಾಶ್ವತವಾಗಿ ನಿಲ್ಲುತ್ತಾನೆ ಮತ್ತು ಆ ಕಲೆಯ ಆರೋಗ್ಯಕ್ಕೆ ಕಾರಣವಾಗುತ್ತಾನೆ ಎಂದು ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಸ್ವರ್ಣವಲ್ಲೀ ಮಠದಲ್ಲಿ ಆಯೋಜಿಸಿದ್ದ ಎರಡು ದಿನಗಳ ಯಕ್ಷೋತ್ಸವದ ಸಮಾರೋಪದಲ್ಲಿ ಮಾತನಾಡಿದ ಅವರು, ಕಲಾವಿದನು ಕಲೆಯ ಹದವರಿತು ಅಭಿನಯಿಸಬೇಕು. ಯಕ್ಷಗಾನ ಕಲೆಯಲ್ಲಿ ನೃತ್ಯ, ಮಾತು, ಅಭಿನಯ, ಭಾವಾಭಿನಯ, ಪಾತ್ರದ ತತ್ವದ ಅರಿವು ಸೇರಿ ಎಲ್ಲವೂ ಹದವಿರಬೇಕು. ಹಾಗಿದ್ದಾಗ ಅಂಥ ಕಲಾವಿದ ಶಾಶ್ವತವಾಗಿ ಉಳಿಯುತ್ತಾನೆ ಎಂದರು.

ಯಲ್ಲಾಪುರ ಡಿಎಫ್ಒ ಹರ್ಷ ಭಾನು ಮಾತನಾಡಿ, ಕೀರ್ತಿಗಾಗಿ ಕಲಾರಾಧನೆ ಆಗದೆ ತೃಪ್ತಿಗಾಗಿ ಕಲೆಯ ಜತೆ ಬೆಸೆದುಕೊಳ್ಳಬೇಕು. ಆಗ ಜೀವನದಲ್ಲಿ ಧನ್ಯತೆ, ಕಲೆಗೆ ಅರ್ಥ ಬರುತ್ತದೆ ಎಂದು ಹೇಳಿದರು. 

ADVERTISEMENT

ಎಂ.ಎ.ಹೆಗಡೆ ದಂಟಕಲ್ ಪ್ರಶಸ್ತಿಯನ್ನು ಹಿರಿಯ ಕಲಾವಿದ ಮೃತ್ಯುಂಜಯ ಗಿಂಡಿಮನೆ ದಂಪತಿಗೆ ಪ್ರದಾನ ಮಾಡಲಾಯಿತು. 

ಪ್ರಮುಖರಾದ ಎಂ.ಎನ್.ಹೆಗಡೆ ಹಳವಳ್ಳಿ, ನಾಗರಾಜ ಜೋಶಿ ಸೋಂದಾ ಇತರರಿದ್ದರು. ಯಕ್ಷ ಶಾಲ್ಮಲಾ ಪ್ರಮುಖ ಆರ್.ಎಸ್.ಹೆಗಡೆ ಭೈರುಂಬೆ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.