ADVERTISEMENT

ಅಟಲ್ ಜನ್ಮಶತಮಾನೋತ್ಸವ ಅದ್ದೂರಿ ಆಚರಣೆ: ಸುನೀಲ ಹೆಗಡೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2025, 12:49 IST
Last Updated 29 ಜನವರಿ 2025, 12:49 IST
<div class="paragraphs"><p>ಸುನೀಲ ಹೆಗಡೆ</p></div>

ಸುನೀಲ ಹೆಗಡೆ

   

ಕಾರವಾರ: ‘ಅಜಾತಶತ್ರು ಎಂದೇ ಖ್ಯಾತಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ಇಡೀ ವರ್ಷ ವಿವಿಧ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ಅಟಲ್ ಜನ್ಮಶತಮಾನೋತ್ಸವ ಆಚರಣೆ ಸಮಿತಿಯ ಸಂಚಾಲಕ ಸುನೀಲ ಹೆಗಡೆ ಹೇಳಿದರು.

ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಟಲ್ ಬಿಹಾರಿ ವಾಜಪೇಯಿ ಜನಸಂಘವನ್ನು ದೀನದಯಾಳ ಉಪಾಧ್ಯಾಯ ಅವರ ಬಳಿಕ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದರು. ಅವರ ಮುತ್ಸದ್ಧಿತನ, ವಿದೇಶಾಂಗ ನೀತಿಯ ಮೂಲಕ ಜಾಗತಿಕಮಟ್ಟದಲ್ಲಿ ಹೆಸರು ಮಾಡಿದ್ದರು. ಜಿಲ್ಲೆಯೊಂದಿಗೂ ನಂಟು ಹೊಂದಿದ್ದ ಅವರು ಹಲವು ಬಾರಿ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು’ ಎಂದರು.

ADVERTISEMENT

‘ಜ.14 ರಿಂದ ಅಟಲ್ ಸ್ಮೃತಿ ಸಂಕಲನ ಕಾರ್ಯಕ್ರಮ ಆರಂಭಿಸಲಾಗಿದ್ದು, ಫೆ.15ರ ವರೆಗೂ ನಡೆಯಲಿದೆ. ಅಟಲ್ ನಿಕಟವರ್ತಿಗಳನ್ನು ಗುರುತಿಸಿ, ಅವರ ಅನುಭವ ಸಂಗ್ರಹಿಸಲಾಗುತ್ತಿದೆ. ಜೊತೆಗೆ ಅಟಲ್ ಬಿಹಾರಿ ವಾಜಪೇಯಿ ಅವರ ನಿಕಟವರ್ತಿಯಾಗಿದ್ದವರಿಗೆ ಸನ್ಮಾನಿಸಲಾಗುತ್ತಿದೆ. ಎರಡನೇ ಹಂತದಲ್ಲಿ ಅಟಲ್ ವಿರಾಸತ್ ಸಮ್ಮೇಳನ ನಡೆಯಲಿದೆ. ಅಟಲ್ ಅವರ ಲೇಖನ, ಅವರ ನೆನಪು ಸಂಗ್ರಹಿಸಿದವರಿಗೆ ಸನ್ಮಾನಿಸುವ ಕೆಲಸ ನಡೆಯಲಿದೆ’ ಎಂದರು.

ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೇಕರ್, ಪ್ರಮುಖರಾದ ರಾಜು ಭಂಡಾರಿ, ನಾಗೇಶ ಕುರ್ಡೇಕರ್, ಕಿಶನ್ ಕಾಂಬ್ಳೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.