
ಪ್ರಜಾವಾಣಿ ವಾರ್ತೆ
ಬೆಂಕಿ (ಪ್ರಾತಿನಿಧಿಕ ಚಿತ್ರ)
ಯಲ್ಲಾಪುರ: ತಾಲ್ಲೂಕಿನ ಉಮ್ಮಚ್ಗಿಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿಗೆ ಬುಧವಾರ ನಸುಕಿನ ಜಾವ ಕಳ್ಳರು ಬೆಂಕಿ ಹಾಕಿದ್ದು, ಬ್ಯಾಂಕಿನ ಒಳಗಿದ್ದ ಕಂಪ್ಯೂಟರ್, ಪ್ರಿಂಟರ್ ಸುಟ್ಟು ಕರಕಲಾಗಿವೆ.
ಬ್ಯಾಂಕ್ ಸಿಬ್ಬಂದಿ ರಾಘವೇಂದ್ರ ಗಣಪತಿ ನಾಯಕ ಠಾಣೆಗೆ ದೂರು ನೀಡಿದ್ದು, ‘ಕಳ್ಳರು ಬ್ಯಾಂಕಿನ ಕಿಟಕಿಯನ್ನು ಕಟರ್‌ನಿಂದ ಕಟ್ ಮಾಡಿ ಒಳ ಪ್ರವೇಶಿಸಿದ್ದಾರೆ. ಕಳವಿಗೆ ಯತ್ನಿಸಿ ಬೆಂಕಿ ಹಾಕಿದ್ದಾರೆ. ಸ್ಕ್ಯಾನರ್, ಕಂಪ್ಯೂಟರ್, ಪ್ರಿಂಟರ್ ಸುಟ್ಟುಹೋಗಿದ್ದು ಅಂದಾಜು ₹ 2 ಲಕ್ಷ ಹಾನಿಯಾಗಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.