ADVERTISEMENT

ಗೋಕರ್ಣದಲ್ಲಿ ಕಡಲ ತೀರ ಅತಿಕ್ರಮಣ: ನೋಟಿಸ್ ಜಾರಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 4:27 IST
Last Updated 4 ಡಿಸೆಂಬರ್ 2025, 4:27 IST
ಗೋಕರ್ಣ ಸಮೀಪದ ನಾಡುಮಾಸ್ಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಡಲ ತೀರದಲ್ಲಿ ಸರ್ಕಾರಿ ಜಾಗವನ್ನು (ಹರಿದುಬಂದ ಜಾಗ) ಅತಿಕ್ರಮಿಸಿ, ರೆಸಾರ್ಟ್, ವಸತಿ ಗೃಹ, ಹೋಟೆಲ್ ನಿರ್ಮಿಸಿರುವುದು 
ಗೋಕರ್ಣ ಸಮೀಪದ ನಾಡುಮಾಸ್ಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಡಲ ತೀರದಲ್ಲಿ ಸರ್ಕಾರಿ ಜಾಗವನ್ನು (ಹರಿದುಬಂದ ಜಾಗ) ಅತಿಕ್ರಮಿಸಿ, ರೆಸಾರ್ಟ್, ವಸತಿ ಗೃಹ, ಹೋಟೆಲ್ ನಿರ್ಮಿಸಿರುವುದು    

ಗೋಕರ್ಣ: ಸಮೀಪದ ನಾಡುಮಾಸ್ಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಡಲ ತೀರದಲ್ಲಿ ಸರ್ಕಾರಿ ಜಾಗವನ್ನು (ಹರಿದುಬಂದ ಜಾಗ) ಒತ್ತುವರಿ ಮಾಡಿ ನಿರ್ಮಿಸಿದ ರೆಸಾರ್ಟ್, ವಸತಿ ಗೃಹ, ಹೋಟೆಲ್‌ ಮಾಲೀಕರಿಗೆ ತಹಶೀಲ್ದಾರ್ ಶ್ರಿಕೃಷ್ಣ ಕಾಮ್ಕರ್ ಅವರು ಮಂಗಳವಾರ ನೋಟಿಸ್ ಜಾರಿ ಮಾಡಿದ್ದಾರೆ’ ಎಂದು ನಾಡುಮಾಸ್ಕೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ಈಶ್ವರ ಗೌಡ ತಿಳಿಸಿದರು.

‘ಒತ್ತುವರಿ ಜಾಗದಲ್ಲಿ ನಿರ್ಮಿಸಿದ ರೆಸಾರ್ಟ್, ಕಟ್ಟಡ, ವಸತಿಗೃಹದ ಮಾಲೀಕರಿಗೆ ಅಧಿಕೃತ ದಾಖಲೆಗಳನ್ನು ಡಿ.15ರ ಒಳಗೆ ನೀಡುವಂತೆ ತಹಶೀಲ್ದಾರ್ ನೋಟಿಸ್‌ ಮೂಲಕ ತಿಳಿಸಿದ್ದು, 16ರಂದು ವಿಚಾರಣೆ ನಡೆಸಿ, ಹೈಕೋರ್ಟ್ ಆದೇಶದಂತೆ ಕ್ರಮ ತೆಗೆದುಕೊಳ್ಳಲಾಗುವುದು ತಿಳಿಸಿದ್ದಾರೆ’ ಎಂದರು.

ಈ ಬಗ್ಗೆ ಪ್ರಜಾವಾಣಿ ವಿಸೃತ ವರದಿ ಮಾಡಿತ್ತು. ಸ್ಥಳೀಯ ಗ್ರಾಮ ಪಂಚಾಯ್ತಿ ಸೇರಿದಂತೆ, ಯಾವುದೇ ಇಲಾಖೆಯಿಂದ ಅಧಿಕೃತ ದಾಖಲೆಯಿಲ್ಲದೇ ನಾಡುಮಾಸ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುಬ್ಬನಸಸಿ, ಗಂಗೆಕೊಳ್ಳ ಮತ್ತು ಗಂಗಾವಳಿ ಕಡಲತೀರದಲ್ಲಿ ಸುಮಾರು 2 ಕಿ.ಮೀ ವ್ಯಾಪ್ತಿಯಲ್ಲಿ ಅನೇಕ ರೆಸಾರ್ಟ್, ವಸತಿಗೃಹ, ಹೋಟೆಲ್‍ಗಳು ನಿರ್ಮಾಣವಾಗಿರುವ ಬಗ್ಗೆ ‘ಪ್ರಜಾವಾಣಿ’ ನ.28ರಂದು ‘ಒತ್ತುವರಿ’ಗೆ ನಾಡುಮಾಸ್ಕೇರಿ ಕಡಲತೀರ ಬಲಿ’ ಶೀರ್ಷಿಕೆ ಅಡಿ ವರದಿ ಪ್ರಕಟಿಸಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.