ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ಜೊಯಿಡಾ: ತಾಲ್ಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಕುಂಬಾರವಾಡಾ ವನ್ಯಜೀವಿ ವಲಯದ ಡೇರಿಯಾ ಗ್ರಾಮದಲ್ಲಿ ರೈತ ಶಾಂತಾ ಹನುಮಂತ ಡೇರೆಕರ ಎಂಬುವರ ಮೇಲೆ ಸೋಮವಾರ ಬೆಳಗ್ಗೆ ಕರಡಿ ದಾಳಿ ಮಾಡಿದೆ.
ಗ್ರಾಮದ ಖುಂಬಯೆ ಎಂಬಲ್ಲಿ ತನ್ನ ಜಮೀನಿನಲ್ಲಿ ದನ ಮೇಯಿಸುತಿದ್ದಾಗ ಮೂರು ಕರಡಿಗಳು ಏಕಕಾಲಕ್ಕೆ ದಾಳಿ ಮಾಡಿದ್ದು ಇದರಿಂದ ಮುಖ ಭಾಗ, ತಲೆ, ಬೆನ್ನು ಸೇರಿದಂತೆ ಅಂಗಾಂಗಗಳಿಗೆ ಭಾರಿ ಗಾಯಗಳಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ದಾಳಿಗೆ ಒಳಗಾದ ವ್ಯಕ್ತಿಗೆ ಕುಂಬಾರವಾಡಾ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಜೊಯಿಡಾ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್‌ಗೆ ರವಾನಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.