ADVERTISEMENT

ಭಾಗ್ವತ ಕಲಾ ಸಂಭ್ರಮ, ಪ್ರಶಸ್ತಿ ಪ್ರದಾನ 7ರಂದು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 4:34 IST
Last Updated 4 ಡಿಸೆಂಬರ್ 2025, 4:34 IST
ಶಾಲಾ ಮಕ್ಕಳು ಯಕ್ಷಗಾನ ನೃತ್ಯ 
ಶಾಲಾ ಮಕ್ಕಳು ಯಕ್ಷಗಾನ ನೃತ್ಯ    

ಶಿರಸಿ: ಭಾಗ್ವತ ಕಲಾ ಸಂಭ್ರಮ ಕಾರ್ಯಕ್ರಮ ನಗರದ ಟಿಆರ್‌ಸಿ ಸಭಾಂಗಣದಲ್ಲಿ ಡಿ.7ರಂದು ಸಂಜೆ 4.30 ಗಂಟೆಗೆ ಏರ್ಪಡಿಸಲಾಗಿದೆ.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಸತ್ಯನಾರಾಯಣ ರಾಜು ಅವರಿಗೆ ಭಾಗ್ವತ ಕಲಾ ಪ್ರಶಸ್ತಿ ಪ್ರಧಾನ ಮಾಡಲಾಗುವುದು. 60ರ ವರ್ಷದ ಅವರು ಷಷ್ಟಿ ಚಕ್ರ ವರ್ಣ ನಾಟ್ಯ ಕಲಾ ಪ್ರದರ್ಶನ ನೀಡುವರು. 

ನಟರಾಜ ನೃತ್ಯ ಶಾಲೆ ಪಾಲಕ ವೃಂದ ಕಾರ್ಯಕ್ರಮ ಏರ್ಪಡಿಸಿದ್ದು, ವಿದ್ಯಾರ್ಥಿಗಳು ಕರ್ನಾಟಕ ಸಂಗೀತ ಗಾಯನ ಪ್ರಸ್ತುತ ಪಡಿಸುವರು. ಭರತನಾಟ್ಯ ಪ್ರದರ್ಶನದ ಹಿಮ್ಮೇಳದ ಗಾಯನದಲ್ಲಿ ವಸುಧಾ ಬಾಲಕೃಷ್ಣ, ನಟುವಾಂಗ ವಿ. ಭರತ ನಾರಾಯಣ, ಮೃದಂಗ ವಿ. ಬಾಲಕೃಷ್ಣ ಮತ್ತು ಕೊಳಲು ವಾದನದಲ್ಲಿ ವಿ. ದೀಪಕ ಹೆಬ್ಬಾರ ಭಾಗವಹಿಸುವವರು ಎಂದು ಸಂಘಟಕರು ತಿಳಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.