ADVERTISEMENT

ಭಜನಾ ಸಪ್ತಾಹ: ಕನಸಿಗದ್ದೆಯಲ್ಲಿ ನಡೆದ ರಂಗೋಲಿ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 7:28 IST
Last Updated 29 ಜನವರಿ 2026, 7:28 IST
ಅಂಕೋಲಾದ ಕನಸಿಗದ್ದೆಯಲ್ಲಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಗಮನ ಸೆಳೆದ ರಂಗೋಲಿಗಳು
ಅಂಕೋಲಾದ ಕನಸಿಗದ್ದೆಯಲ್ಲಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಗಮನ ಸೆಳೆದ ರಂಗೋಲಿಗಳು   

ಅಂಕೋಲಾ: ಪಟ್ಟಣದ ಕನಸಿಗದ್ದೆಯ ಶ್ರೀ ನರಸಿಂಹ ಭಜನಾ ಮಂಡಳಿಯ ಆಶ್ರಯದಲ್ಲಿ 7 ದಿನಗಳ ಕಾಲ ನಡೆದ ಭಜನಾ ಸಪ್ತಾಹವು ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮ ವಿಜೃಂಭಣೆಯಿಂದ ನಡೆದು ಶ್ರೀ ನರಸಿಂಹ ದೇವರು ಹಾಗೂ ರಾಮನಾಥ ದೇವರ ರಥೋತ್ಸವ ಸಂಪನ್ನಗೊಂಡಿತು.

ಭಜನಾ ಸಪ್ತಾಹದ ಪ್ರಯುಕ್ತ ಆಯೋಜಿಸಲಾದ ರಂಗೋಲಿ ಸ್ಪರ್ಧೆಯಲ್ಲಿ ಐವತ್ತಕ್ಕೂ ಹೆಚ್ಚು ರಂಗೋಲಿ ಚಿತ್ತಾರಗಳು ಪ್ರದರ್ಶನಗೊಂಡು ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿದವು. ಅವುಗಳಲ್ಲಿ ವಿಶೇಷವಾಗಿ ಈಶ್ವರ, ಬಾಲಕೃಷ್ಣ, ವರಾಹರೂಪ, ಆಹಾರ ಧಾನ್ಯ ಹಾಗೂ ಸಾಲುಮರದ ತಿಮ್ಮಕ್ಕ ಸೇರಿದಂತೆ ಹಲವು ರಂಗೋಲಿಗಳು ನೋಡುಗರ ಗಮನ ಸೆಳೆದವು.

ಕೊನೆಯ ದಿನ ದೇವರ ಪೂಜೆ, ರಥೋತ್ಸವ ಹಾಗೂ ಸವಾಲು ಕಾರ್ಯಕ್ರಮಗಳೊಂದಿಗೆ ‘ಪ್ರೇಯಸಿ ಅಲ್ಲ ರಾಕ್ಷಸಿ’ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಂಡು ಭಜನಾ ಸಪ್ತಾಹ ಧಾರ್ಮಿಕ ಆಚರಣೆಯೊಂದಿಗೆ ಸಂಪನ್ನಗೊಂಡಿತು.

ADVERTISEMENT
ಅಂಕೋಲಾದ ಕನಸಿಗದ್ದೆಯಲ್ಲಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಗಮನ ಸೆಳೆದ ರಂಗೋಲಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.