ಭಟ್ಕಳ (ಉತ್ತರ ಕನ್ನಡ): ತಾಲ್ಲೂಕಿನ ಅಳ್ವೆಕೋಡಿಯಲ್ಲಿ ಸಮುದ್ರದಲ್ಲಿ ದೋಣಿ ಮಗುಚಿ, ನಾಪತ್ತೆಯಾಗಿದ್ದ ನಾಲ್ವರ ಪೈಕಿ, ಮೀನುಗಾರ ರಾಮಕೃಷ್ಣ ಮೊಗೇರ (45) ಅವರ ಶವ ಸಿಕ್ಕಿದೆ.
ದುರ್ಘಟನೆ ಸಂಭವಿಸಿದ ಸ್ಥಳದಿಂದ 3 ಕಿ.ಮೀ ದೂರದ ಹೊನ್ನಿಗದ್ದೆ ಕಡಲತೀರದಲ್ಲಿ ಮೃತದೇಹ ಪತ್ತೆಯಾಗಿದೆ. ಇನ್ನೂ ಮೂವರ ಪತ್ತೆಗೆ ಹುಟುಕಾಟ ಮುಂದುವರೆದಿದೆ.
ಅಳ್ವೆಕೋಡಿ ಬಂದರಿಗೆ ಭೇಟಿ ನೀಡಿದ್ದ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ, ‘ಮೀನುಗಾರರು ಸೂಚನೆ ಕಡೆಗಣಿಸಿ ಸಮುದ್ರಕ್ಕೆ ಇಳಿಯಬಾರದು. ಜೀವರಕ್ಷಕ ಜಾಕೆಟ್ ಧರಿಸಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.