
ಪ್ರಜಾವಾಣಿ ವಾರ್ತೆ
ದಾಂಡೇಲಿ: ಕರ್ನಾಟಕ ಬಹುಜನ ಚಳವಳಿ ಸಂಘದಿಂದ ಭೀಮಾ ಕೋರೆಗಾಂವ ವಿಜಯೋತ್ಸವವನ್ನು ನಗರದ ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸುಮಾರು 100 ಹೆಚ್ಚು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ಉಚಿತವಾಗಿ ವಿತರಿಸಲಾಯಿತು.
ರಾಜ್ಯ ಘಟಕದ ಅಧ್ಯಕ್ಷ ದೇವೆಂದ್ರ ಮಾದರ, ಅಲ್ಪಸಂಖ್ಯಾತರ ಘಟಕ ರಾಜೇಸಾಬ ಹಾವರಗಿ, ರಾಜ್ಯ ಕಾರ್ಯದರ್ಶಿ ರವಿ ದಂಡಗಿ, ಮಹಿಳಾ ಘಟಕದ ಬೇಬಿ ಅಂಬಾಡಿ, ಪ್ರಮುಖರಾದ ಶೇಖರ ಮಾದರ, ಕಾಸು ದೊಡಮನಿ, ಉದಯ ಬಸೋಜಿ, ವೆಂಕಟೇಶ ಹರಿಜನ, ನಾಗಮ್ಮ ಹರಿಜನ, ಭೀಮಶಿ ಬಾದುಲಿ, ಪ್ರಜ್ವಲ್ ಹಾದಿಮನಿ, ತಿಪ್ಪಣ್ಣ ಡೂನೂರು, ಶಿವಾನಂದ ಪೂಜಾರ, ಮಂಜು ಬಂಡಿವಡ್ಡರ, ವಿಜಯ ಚವ್ಹಾಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.