ADVERTISEMENT

ಬಲೆಗೆ ಬಿದ್ದ ಭಾರಿ ಗಾತ್ರದ ಕುರುಡೆ ಮೀನು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 15:44 IST
Last Updated 15 ಫೆಬ್ರುವರಿ 2020, 15:44 IST
ಕಾರವಾರದ ಬೈತ್‌ಕೋಲ್‌ ಮೀನುಗಾರಿಕಾ ಬಂದರಿನಲ್ಲಿ ಶನಿವಾರ ಕಂಡುಬಂದ 25 ಕೆ.ಜಿ. ತೂಕದ ಕುರುಡೆ ಮೀನು
ಕಾರವಾರದ ಬೈತ್‌ಕೋಲ್‌ ಮೀನುಗಾರಿಕಾ ಬಂದರಿನಲ್ಲಿ ಶನಿವಾರ ಕಂಡುಬಂದ 25 ಕೆ.ಜಿ. ತೂಕದ ಕುರುಡೆ ಮೀನು   

ಕಾರವಾರ: ನಗರದಿಂದ ಶನಿವಾರ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ಬಲೆಗೆ ಕುರುಡೆ ಜಾತಿಯ ದೊಡ್ಡಮೀನು ಬಿದ್ದಿದೆ. ಮೀನು ಸುಮಾರು 25 ಕೆ.ಜಿ ತೂಕವಿತ್ತೆಂದು ಮೀನುಗಾರರು ತಿಳಿಸಿದ್ದಾರೆ.

ಹುಬ್ಬಳ್ಳಿಯವ್ಯಾಪಾರಿಯೊಬ್ಬರು ₹ 7,500 ನೀಡಿ ಈ ಮೀನನ್ನು ಖರೀದಿಸಿದರು.‘ಸಮುದ್ರದಲ್ಲಿಈ ಮೀನು ಕಾಣಸಿಗುವುದು ತೀರಾ ವಿರಳ.15 ಕೆ.ಜಿ.ಯಿಂದ 28 ಕೆ.ಜಿ.ಯವರೆಗೂ ತೂಕವಿರುತ್ತದೆ. ಇದಕ್ಕೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೆ ₹ 300ರಷ್ಟು ದರವಿದೆ. ಬುಲುಗೆ ಮೀನು ಸಹ ಇದೇ ಆಕಾರ ಮತ್ತು ಗಾತ್ರವನ್ನು ಹೊಂದಿರುತ್ತದೆ. ಅದಕ್ಕೆ ಪ್ರತಿ ಕೆ.ಜಿ.ಗೆ ₹ 3,000ದವರೆಗೆ ಬೆಲೆಯಿದೆ’ ಎಂದು ಮೀನುಗಾರರ ವಿನಾಯಕ ಹರಿಕಂತ್ರ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT