ADVERTISEMENT

ಅಂಕೋಲಾ: ಕಡಲ ತೀರಕ್ಕೆ ಬಂದ ಕಪ್ಪು ರಾಸಾಯನಿಕ

ಅಲೆಗಳೊಂದಿಗೆ ತೇಲಿ ಬರುತ್ತಿದೆ ಡಾಂಬರಿನಂತಹ ವಸ್ತು

​ಪ್ರಜಾವಾಣಿ ವಾರ್ತೆ
Published 1 ಮೇ 2019, 15:20 IST
Last Updated 1 ಮೇ 2019, 15:20 IST
ಅಂಕೋಲಾ ತಾಲ್ಲೂಕಿನ ಹೊನ್ನೆಗುಡಿ ಸಮುದ್ರ ತೀರದಲ್ಲಿ ತೇಲಿ ಬಂದ ಡಾಂಬರಿನಂತಹ ವಸ್ತು
ಅಂಕೋಲಾ ತಾಲ್ಲೂಕಿನ ಹೊನ್ನೆಗುಡಿ ಸಮುದ್ರ ತೀರದಲ್ಲಿ ತೇಲಿ ಬಂದ ಡಾಂಬರಿನಂತಹ ವಸ್ತು   

ಅಂಕೋಲಾ:ಅಲೆಗಳೊಂದಿಗೆ ಬಂದತೈಲ ಮಿಶ್ರಿತ ಡಾಂಬರಿನ ಮಾದರಿಯ ಜಿಡ್ಡು,ತಾಲ್ಲೂಕಿನ ಸಮುದ್ರ ತೀರದಉದ್ದಕ್ಕೂ ಅಂಟಿಕೊಂಡಿದೆ. ಇದು ಕಡಲ ದಂಡೆಯುದ್ದಕ್ಕೂ ಶೇಖರಣೆಯಾಗುತ್ತಿರುವುದುಮೀನುಗಾರರಆತಂಕಕ್ಕೆ ಕಾರಣವಾಗಿದೆ.

ಬೆಳಂಬಾರ, ನದಿಬಾಗ, ಹೊನ್ನೆಗುಡಿ, ಶೇಡಿಕುಳಿ, ಕೇಣಿ, ಹನಿಬೀಚ್, ಬೇಲೆಕೇರಿ, ಹಾರವಾಡಾ ಭಾಗದಲ್ಲಿ ನಾಲ್ಕೈದು ದಿನಗಳಿಂದ ಸಮುದ್ರದ ಅಲೆಯೊಂದಿಗೆ ಬಂದು ದಡದಲ್ಲಿ ಶೇಖರಣೆಯಾಗುತ್ತಿದೆ. ಎರಡು ದಿನಗಳಿಂದಈ ಪ್ರಮಾಣ ಹೆಚ್ಚಿದೆ.

ಹಡಗುಗಳಿಂದ ವಿಸರ್ಜಿಸಿದ ಎಂಜಿನ್ ಆಯಿಲ್ ಇದಾಗಿರಬಹುದು ಎಂದು ಸ್ಥಳೀಯರು ಊಹಿಸಿದ್ದಾರೆ. ಸಮುದ್ರದಲ್ಲಿ ನಿತ್ಯವೂ ನೂರಾರು ದೊಡ್ಡ ಹಡಗುಗಳು ಸಂಚರಿಸುತ್ತವೆ. ವಾಹನಗಳ ಮಾದರಿಯಲ್ಲೇ ಇಂತಿಷ್ಟು ದೂರ ಸಂಚರಿಸಿದ ಮೇಲೆ ಹಡಗುಗಳ ಎಂಜಿನ್ ಆಯಿಲ್ ಬದಲಾಯಿಸಬೇಕಾಗುತ್ತದೆ. ಆ ಕಾರ್ಯಕ್ಕೆ ಹಡಗನ್ನು ಬಂದರಿನಲ್ಲಿ ನಿಲ್ಲಿಸಿದರೆ ಶುಲ್ಕ ಕಟ್ಟಬೇಕು. ಅದರಿಂದ ತಪ್ಪಿಸಿಕೊಳ್ಳಲು ಸಮುದ್ರದಲ್ಲೇ ಆಯಿಲ್ ಬದಲಿಸಿ ತ್ಯಾಜ್ಯವನ್ನು ಸಮುದ್ರಕ್ಕೆ ಚೆಲ್ಲುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ADVERTISEMENT

ಇವು ಜಲಚರಗಳಿಗೆ ಮಾರಕವಾಗಿದೆ. ಪ್ರವಾಸೋದ್ಯಮಕ್ಕೂ ಧಕ್ಕೆಯಾಗುತ್ತದೆ. ಈ ಬಗ್ಗೆಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮೀನುಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೀನಿಗೆ ಬರ: ನಾಡದೋಣಿ, ಪರ್ಸೀನ್ ಬೋಟುಗಳಿಗೆ 2– 3 ತಿಂಗಳುಗಳಿಂದ ಮೀನು ಸಿಗುತ್ತಿಲ್ಲ. ಪ್ರತಿ ವರ್ಷ ಏಪ್ರಿಲ್– ಮೇ ತಿಂಗಳಲ್ಲಿ ಸಾಕಷ್ಟುಮೀನು ಸಿಗುತ್ತಿತ್ತು. ಬಂಗುಡೆ, ತಾರ್ಲಿ ಜಾತಿಯ ಮೀನುಗಳು ಬಲೆಗೆ ಬೀಳುತ್ತಿದ್ದವು. ಗುಂಪಾಗಿ ಬರುವ ಮೀನುಗಳು ಸಿಗುವುದರಿಂದ ಪರ್ಸೀನ್ ಬೋಟುಗಳ ಮಾಲೀಕರಿಗೆ ಸಾಕಷ್ಟು ಆದಾಯ ಸಿಗುತ್ತಿತ್ತು. ಆದರೆ, ಈ ಬಾರಿ ಮೀನು ಸಿಗದೆ ತೀವ್ರ ಸಂಕಷ್ಟ ಅನುಭವಿಸಬೇಕಾಗಿದೆ ಎನ್ನುತ್ತಾರೆ ಬೇಲೆಕೇರಿಯ ಮೀನುಗಾರ ಮುಖಂಡಸುಧಾಕರ ಜಾಂಬಾವಾಳಿಕರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.