ಕುಮಟಾ: ಪಟ್ಟಣದ ವನ್ನಳ್ಳಿ ಸಮುದ್ರ ತೀರದಲ್ಲಿ 13.5 ಮೀಟರ್ ಉದ್ದದ ನೀಲಿ ತಿಮಿಂಗಲ ಕಳೇಬರವೊಂದು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದೆ.
ಆರ್.ಎಫ್.ಒ ಪ್ರವೀಣ ನಾಯಕ ಮಾಹಿತಿ ನಿಡಿ, ‘ನೀಲಿ ತಿಮಿಂಗಲು ಮೃತಪಟ್ಟು ಒಂದು ವಾರಕ್ಕೂ ಹೆಚ್ಚು ಸಮಯ ಆಗಿರಬಹುದು. ಪೂರ್ಣ ಬೆಳವಣಿಗೆ ಹೊಂದಿರದ ಅದರ ದೇಹದ ಭಾಗಗಳು ಅಲ್ಲಲ್ಲಿ ಹರಡಿ ಬಿದ್ದಿವೆ. ಸಾವಿಗೆ ಕಾರಣ ತಿಳಿಯಲು ಆಗಮಿಸಿದ್ದ ಕುಂದಾಪುರದ ‘ರೀಫ್ ವಾಚ್’ ಸಂಸ್ಥೆಯ ತಜ್ಞರಿಗೂ ಸರಿಯಾದ ಮಾಹಿತಿ ಲಭ್ಯವಾಗಲಿಲ್ಲ. ಸುಮಾರು 10 ಟನ್‌ಗೂ ಅಧಿಕ ಭಾರವಿರುವ ಕಳೇಬರವನ್ನು ಗುರುವಾರ ಮಣ್ಣು ಮಾಡಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.