ADVERTISEMENT

ಮರಳಿನಲ್ಲಿ ಸಿಲುಕಿದ ಮೀನುಗಾರಿಕೆ ದೋಣಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2023, 13:28 IST
Last Updated 1 ಅಕ್ಟೋಬರ್ 2023, 13:28 IST
ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಮರಳಿನಲ್ಲಿ ಸಿಲುಕೊಂಡಿರುವ ಮೀನುಗಾರಿಕೆ ದೋಣಿ
ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಮರಳಿನಲ್ಲಿ ಸಿಲುಕೊಂಡಿರುವ ಮೀನುಗಾರಿಕೆ ದೋಣಿ   

ಕಾರವಾರ: ಗಾಳಿ, ಸಮುದ್ರದ ಅಲೆಯ ಅಬ್ಬರಕ್ಕೆ ಶನಿವಾರ ಇಲ್ಲಿನ ಟ್ಯಾಗೋರ್ ಕಡಲತೀರಕ್ಕೆ ಸಮೀಪ ಬಂದು ಸಿಲುಕೊಂಡಿದ್ದ ಉಳ್ಳಾಲದ ಮಿಸ್ಬಾ ಹೆಸರಿನ ಮೀನುಗಾರಿಕೆ ದೋಣಿ ಭಾನುವಾರ ಮತ್ತಷ್ಟು ಹತ್ತಿರ ತಲುಪಿದ್ದು ಮರಳಿನಲ್ಲಿ ಸಿಲುಕೊಂಡಿದೆ.

ಕಡಲತೀರಕ್ಕೆ ಸಮೀಪದಲ್ಲಿ ಬಂದು ಮರಳಿನಲ್ಲಿ ಸಿಲುಕೊಂಡಿದ್ದ ದೋಣಿಯನ್ನು ಇನ್ನೊಂದು ದೋಣಿಯ ಸಹಾಯದಿಂದ ಸಮುದ್ರದತ್ತ ಎಳೆಯಲು ಪ್ರಯತ್ನ ನಡೆದಿತ್ತು. ಸಮುದ್ರ ಸೇರುವ ಹಂತದಲ್ಲಿ ದೋಣಿ ಎಳೆಯಲು ಕಟ್ಟಿದ್ದ ಉಕ್ಕಿನ ಹಗ್ಗ ತುಂಡಾಗಿದ್ದರಿಂದ ದೋಣಿ ಮತ್ತೆ ಮುಂದೆ ಬಂದು ನಿಂತಿದೆ. ತಡರಾತ್ರಿ ಗಾಳಿಯ ಅಬ್ಬರ ಹೆಚ್ಚಿದರಿಂದ ತೀರಕ್ಕೆ ಸಮೀಪಿಸಿ ಮರಳಿನಲ್ಲಿ ಸಿಲುಕಿಕೊಂಡು ನಿಂತಿದೆ.

‘ದೋಣಿಯನ್ನು ಸಮುದ್ರಕ್ಕೆ ಎಳೆದೊಯ್ಯಲು ಹಲವು ಪ್ರಯತ್ನ ನಡೆಯಿತಾದರೂ ಸಫಲವಾಗಿಲ್ಲ. ಬಂದರು ಇಲಾಖೆಯ ಟಗ್ ಬೋಟ್ ಬಳಸಿ ದೋಣಿ ಎಳೆಯುವ ಕಾರ್ಯಾಚರಣೆ ನಡೆಸಲು ನಿರ್ಧರಿಸಿದ್ದೇವೆ’ ಎಂದು ದೋಣಿ ಮಾಲೀಕ ಅಲ್ತಾಫ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.