ADVERTISEMENT

ಉತ್ತರ ಕನ್ನಡ | ಜೀತಪದ್ದತಿ ಮಾನವ ಜನಾಂಗಕ್ಕೆ ಕಳಂಕ: ನ್ಯಾ. ಬಿ.ಸಿ.ಚಂದ್ರಶೇಖರ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 7:24 IST
Last Updated 11 ಫೆಬ್ರುವರಿ 2026, 7:24 IST
ಹೊನ್ನಾವರದಲ್ಲಿ ಸೋಮವಾರ ನಡೆದ ಜೀತ ಪದ್ದತಿ ನಿರ್ಮೂಲನಾ ದಿನಾಚರಣೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ದೀಪ ಬೆಳಗಿದರು.
ಹೊನ್ನಾವರದಲ್ಲಿ ಸೋಮವಾರ ನಡೆದ ಜೀತ ಪದ್ದತಿ ನಿರ್ಮೂಲನಾ ದಿನಾಚರಣೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ದೀಪ ಬೆಳಗಿದರು.   

ಹೊನ್ನಾವರ: ಜೀತ ಪದ್ಧತಿ ಸಮಾಜದಲ್ಲಿ ಇನ್ನೂ ಜೀವಂತವಾಗಿರುವುದು ಮನುಷ್ಯತ್ವ ಇರುವವರು ತಲೆತಗ್ಗಿಸುವ ವಿಚಾರವಾಗಿದೆ.ಕಾನೂನಿನ ಅರಿವು ಮೂಡಿಸುವ ಮೂಲಕ ಜೀತಪದ್ಧತಿಯನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕಾಗಿದೆ' ಎಂದು ಸಿವಿಲ್ ನ್ಯಾಯಾಧೀಶ ಬಿ.ಸಿ.ಚಂದ್ರಶೇಖರ ಅಭಿಪ್ರಾಯಪಟ್ಟರು.

ತಾಲ್ಲೂಕು ಕಾನೂನು ನೆರವು ಸಮಿತಿಯ ವತಿಯಿಂದ ನಡೆದ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ತಹಶೀಲ್ದಾರ ಪ್ರವೀಣ ಕರಾಂಡೆ ಅಧ್ಯಕ್ಷತೆ ವಹಿಸಿದ್ದರು. ಎಪಿಪಿ ಸಂಪದಾ ಗುನಗಾ ಉಪನ್ಯಾಸ ನೀಡಿದರು.

ಜೆ.ಎಂ.ಎಫ್.ಸಿ.ನ್ಯಾಯಾಧೀಶ ಅನಿಲ್ ಜೋನ್ ಸಿಕ್ವೇರಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಏಸು ಬೆಂಗಳೂರ, ವಕೀಲರ ಸಂಘದ ವಿ.ಎಂ.ಭಂಡಾರಿ, ಉದಯ ನಾಯ್ಕ, ಉದ್ಯಮಿ ಗಿರೀಶ ಭಕ್ತ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.