ADVERTISEMENT

‘ಛತ್ತೀಸ್‌ಗಡದಲ್ಲಿ ಯೋಧ ವಿಜಯಾನಂದ ಪುತ್ಥಳಿ ಸ್ಥಾಪನೆ’

ಸಮವಸ್ತ್ರ, ಪಾರಿತೋಷಕ, ಪ್ರಮಾಣಪತ್ರ ಹಸ್ತಾಂತರಿಸಿದ ಬಿಎಸ್‌ಎಫ್ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2018, 11:57 IST
Last Updated 8 ಅಕ್ಟೋಬರ್ 2018, 11:57 IST
ಮೃತ ಯೋಧ ವಿಜಯಾನಂದ ನಾಯ್ಕ
ಮೃತ ಯೋಧ ವಿಜಯಾನಂದ ನಾಯ್ಕ   

ಕಾರವಾರ: ನಕ್ಸಲರು ಹೂತಿಟ್ಟಿದ್ದ ಸ್ಫೋಟಕ ಸಿಡಿದು ಮೃತಪಟ್ಟ ನಗರದ ಬಿಎಸ್‌ಎಫ್ ಯೋಧ ವಿಜಯಾನಂದ ಸುರೇಶ ನಾಯ್ಕ ಅವರಪುತ್ಥಳಿಯನ್ನುಬಿಎಸ್‌ಎಫ್‌ನ 121ನೇ ತುಕಡಿಇರುವ ಪ್ರದೇಶದಲ್ಲಿ ಸ್ಥಾಪಿಸಲಾಗುವುದು ಎಂದು ಕಮಾಂಡೆಂಟ್ ವಾಂಕಿಯಾಂಗ್ ಹೇಳಿದ್ದಾರೆ.

ನಗರದ ಕೋಮಾರಪಂಥ ವಾಡಾದಲ್ಲಿರುವವಿಜಯಾನಂದ ಅವರ ಮನೆಗೆ ಸೋಮವಾರ ಭೇಟಿ ನೀಡಿ ಅವರು ಮಾತನಾಡಿದರು.

ಇದೇರೀತಿ, ಬೆಳಗಾವಿ ಜಿಲ್ಲೆಯ ಹಲಗಾದ ಮೃತ ಯೋಧ ಸಂತೋಷ್ ಗುರವ ಅವರಪುತ್ಥಳಿಯನ್ನೂ ಸ್ಥಾಪನೆ ಮಾಡಲಾಗುವುದು. ಈ ತಿಂಗಳ ಅಂತ್ಯಕ್ಕೆ ಕಾರ್ಯಕ್ರಮ ಆಯೋಜನೆಯಾಗಲಿದ್ದು, ಯೋಧರ ಕುಟುಂಬದವರನ್ನೂ ಆಹ್ವಾನಿಸಲಾಗುವುದು.ಸರ್ಕಾರದಿಂದ ಬಿಡುಗಡೆಯಾದ ಪರಿಹಾರದ ಹಣವನ್ನು ಮೃತ ಯೋಧರ ಕುಟುಂಬದ ಖಾತೆಗೆ ಹಾಕಲಾಗಿದೆ ಎಂದು ಅವರು ತಿಳಿಸಿದರು.

ADVERTISEMENT

ಇದೇವೇಳೆ, ಅವರ ಸಹೋದ್ಯೋಗಿಗಳು ಸಂಗ್ರಹಿಸಿದ ₹ 4 ಲಕ್ಷದಲ್ಲಿ₹ 2 ಲಕ್ಷವನ್ನುಚೆಕ್ ಮೂಲಕ ಹಸ್ತಾಂತರಿಸಲಾಯಿತು. ಉಳಿದ ₹ 2 ಲಕ್ಷವನ್ನು ಅಧಿಕಾರಿಗಳು ಸಂತೋಷ್ ಗುರವ ಅವರ ಕುಟುಂಬದವರಿಗೆ ನೀಡಲಿದ್ದಾರೆ. ವಿಜಯಾನಂದ ಅವರ ಸಮವಸ್ತ್ರ, ಪಾರಿತೋಷಕಗಳು,ನಕ್ಸಲ್ ಕಾರ್ಯಾಚರಣೆಯಲ್ಲಿ ಮೃತಪಟ್ಟ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ನೀಡಿದ ಪ್ರಮಾಣಪತ್ರವನ್ನೂ ಅಧಿಕಾರಿಗಳು ಒಪ್ಪಿಸಿದರು.

ಛತ್ತೀಸ್‌ಗಡದ ಕಂಕೇರ್ ಜಿಲ್ಲೆಯ ಛೋಟೆ ಬೇಟಿಯಾ ಎಂಬಲ್ಲಿ ನಕ್ಸಲರು ಹೂತಿಟ್ಟಿದ್ದ ಸ್ಫೋಟಕ ಜುಲೈ 9ರಂದುಸಿಡಿದು ಇಬ್ಬರು ಯೋಧರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.