
ಕುಮಟಾ: ‘ಸ್ಲೀಪರ್ ಬಸ್‌ನ ಮೇಲಿನ ಸೀಟಿನಲ್ಲಿ ಮಲಗಿದ್ದ ನನಗೆ ಬಸ್‌ಗೆ ರಭಸದಿಂದ ಏನೋ ಡಿಕ್ಕಿಯಾಗಿದ್ದು ಅರಿವಿಗೆ ಬಂತು. ನೋಡ ನೋಡುತ್ತಲೆ ಬೆಂಕಿ ಜ್ವಾಲೆ ಕಾಣಿಸಿಕೊಳ್ಳತೊಡಗಿತು. ಜೀವ ಉಳಿಸಿಕೊಳ್ಳಲು ಕಿಟಕಿಯಿಂದ ಜಿಗಿದು ದೂರ ಓಡಿದೆ. ಲ್ಯಾಪ್‌ಟಾಪ್, ಮೊಬೈಲ್ ಸೇರಿದಂತೆ ಎಲ್ಲ ಪರಿಕರಗಳು ಬಸ್‌ನಲ್ಲೇ ಸುಟ್ಟು ಬೂದಿಯಾಗಿವೆ’
ಇದು ಚಿತ್ರದುರ್ಗದ ಜವನಗೊಂಡನಹಳ್ಳಿ ಬಳಿ ನಡೆದ ಭೀಕರ ಅಪಘಾತದಲ್ಲಿ ಜೀವ ಉಳಿಸಿಕೊಂಡು ಬಂದಿರುವ ತಾಲ್ಲೂಕಿನ ಚಿತ್ರಗಿ ಗ್ರಾಮದ ವಿಜಯ ದೇಶಭಂಡಾರಿ ಹೇಳಿದ ಮಾತಿದು. ಅಪಘಾತದ ಭೀಕರತೆ ಕಣ್ಣಾರೆ ಕಂಡಿರುವ ಅವರು ಮೌನಕ್ಕೆ ಜಾರಿದ್ದಾರೆ. ಅಪಘಾತದ ಚಿತ್ರಣ ಕಣ್ಣೆದುರು ತಂದುಕೊಳ್ಳಲೂ ಹಿಂದೇಟು ಹಾಕುತ್ತಿದ್ದಾರೆ.
‘ಸಹೋದರ ಸಂಚರಿಸುತ್ತಿದ್ದ ಖಾಸಗಿ ಬಸ್ ಅಪಘಾತಕ್ಕೀಡಾಗಿದೆ ಎಂಬುದು ತಿಳಿಯಿತು. ಹಿರಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಆತ ಬೇರೊಬ್ಬರ ಮೊಬೈಲ್‌ನಿಂದ ಕರೆ ಮಾಡಿ ಮಾಹಿತಿ ನೀಡಿದ್ದ. ಖಾಸಗಿ ವಾಹನ ಹಿಡಿದು ಹಿರಿಯೂರಿಗೆ ಬಂದೆ. ಅಲ್ಲಿಂದ ಊರಿಗೆ ಕರೆದುಕೊಂಡು ಹೋಗುವಂತೆ ಒತ್ತಾಯಿಸಿದ. ಹೀಗಾಗಿ ಮನೆಗೆ ಕರೆತಂದಿದ್ದೇವೆ. ಘಟನೆ ಬಗ್ಗೆ ಹೆಚ್ಚು ಮಾಹಿತಿ ನೀಡಲು ಆತನಿಗೆ ಸಾಧ್ಯವಾಗುತ್ತಿಲ್ಲ. ದುರ್ಘಟನೆಯಿಂದ ಜರ್ಝರಿತಗೊಂಡಿದ್ದಾನೆ’ ಎಂದು ವಿಜಯ್ ಅವರ ಸಹೋದರ ಗಜೇಂದ್ರ ದೇಶಭಂಡಾರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.