ದಾಂಡೇಲಿ: ನಗರದ ರೋಟರಿ ಕ್ಲಬ್, ಸರ್ಕಾರಿ ಆಸ್ಪತ್ರೆ ಹಾಗೂ ಧಾರವಾಡದ ಎಸ್.ಡಿ.ಎಂ ದಂತ ವಿಜ್ಞಾನ ಕಾಲೇಜು ಸಹಯೋಗದಲ್ಲಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3ರವರೆಗೆ ದಂತ ತಪಾಸಣೆ ಉಚಿತ ಶಿಬಿರ ನಡೆಯಿತು.
ಶಿಬಿರದಲ್ಲಿ 302 ಜನರು ಉಚಿತ ಚಿಕಿತ್ಸೆ ಮತ್ತು ಔಷಧ ನೀಡಲಾಯಿತು. ಡಾ. ಪ್ರೀತಾ ಶೆಟ್ಟಿ, ಡಾ. ಜುಲ್ಫಿನ್ ಶೇಖ್, ಡಾ. ಎಸ್.ಎನ್.ದಫೇದಾರ್, ಡಾ. ಅನಿಲಕುಮಾರ ನಾಯಕ, ಡಾ. ಅನೂಪ್ ಮಡೋಳ್ಕರ ಅವರು ಶಿಬಿರದ ನೇತೃತ್ವ ವಹಿಸಿದ್ದರು.
ರೋಟರಿ ಕ್ಲಬ್ ಅಧ್ಯಕ್ಷ ರಾಹುಲ್ ಬಾವಾಜಿ, ಕಾರ್ಯದರ್ಶಿ ಅಶುತೋಷ್ ಕುಮಾರ್ ರೈ, ಪ್ರಕಾಶ್ ಶೆಟ್ಟಿ, ಎಸ್.ಜಿ.ಬಿರಾದಾರ, ಆರ್.ಪಿ.ನಾಯ್ಕ, ಸುಧಾಕರ ಶೆಟ್ಟಿ, ಸೋಮಕುಮಾರ, ರಾಜೇಶ ತಿವಾರಿ, ಮಿಥುನ್ ನಾಯಕ, ಜಿ.ಇ. ಉಮೇಶ, ಕ್ಸೇವಿಯರ್ ಡಿಸಿಲ್ವಾ, ಗುರುದತ್ ಶೇನ್ವಿ, ರವಿಕುಮಾರ ನಾಯಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.