ADVERTISEMENT

ಕಾರವಾರ: ನೌಕಾನೆಲೆಗೆ ಭೇಟಿ ನೀಡಿದ್ದ ಜನರಲ್ ಬಿಪಿನ್ ರಾವತ್

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2021, 16:04 IST
Last Updated 8 ಡಿಸೆಂಬರ್ 2021, 16:04 IST
ಈ ವರ್ಷ ಏ.5ರಂದು ಕಾರವಾರದ ಕದಂಬ ನೌಕಾನೆಲೆಗೆ ಭೇಟಿ ನೀಡಿದ್ದ ಸೇನಾ ಪಡೆಗಳ ಮುಖ್ಯಸ್ಥ (ಸಿ.ಡಿ.ಎಸ್) ಜನರಲ್ ಬಿಪಿನ್ ರಾವತ್, ನೌಕಾನೆಲೆಯ ಸಿಬ್ಬಂದಿಯ ಜೊತೆ ಸಂವಾದ ನಡೆಸಿದ್ದರು (ಸಂಗ್ರಹ ಚಿತ್ರ)
ಈ ವರ್ಷ ಏ.5ರಂದು ಕಾರವಾರದ ಕದಂಬ ನೌಕಾನೆಲೆಗೆ ಭೇಟಿ ನೀಡಿದ್ದ ಸೇನಾ ಪಡೆಗಳ ಮುಖ್ಯಸ್ಥ (ಸಿ.ಡಿ.ಎಸ್) ಜನರಲ್ ಬಿಪಿನ್ ರಾವತ್, ನೌಕಾನೆಲೆಯ ಸಿಬ್ಬಂದಿಯ ಜೊತೆ ಸಂವಾದ ನಡೆಸಿದ್ದರು (ಸಂಗ್ರಹ ಚಿತ್ರ)   

ಕಾರವಾರ: ತಮಿಳುನಾಡಿನ ಕೂನೂರಿನಲ್ಲಿ ಬುಧವಾರ ಹೆಲಿಕಾಪ್ಟರ್ ಪತನಗೊಂಡು ನಿಧನರಾದ ಸೇನಾ ಪಡೆಗಳ ಮುಖ್ಯಸ್ಥ (ಸಿ.ಡಿ.ಎಸ್) ಜನರಲ್ ಬಿಪಿನ್ ರಾವತ್, ಈ ವರ್ಷ ಏ.5ರಂದು ಇಲ್ಲಿನ ಕದಂಬ ನೌಕಾನೆಲೆಗೆ ಭೇಟಿ ನೀಡಿದ್ದರು.

‘ಸೀಬರ್ಡ್ ಯೋಜನೆ’ಯಡಿ ನೌಕಾನೆಲೆಯಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಪ್ರಗತಿಯನ್ನು ಅವರು ಪರಿಶೀಲಿಸಿದ್ದರು. ಯೋಜನೆಯ ‘2 ಎ’ ಹಂತದಲ್ಲಿ ನೌಕೆಗಳ ದುರಸ್ತಿ ಯಾರ್ಡ್‌ನ ಆಧುನೀಕರಣ, ನೌಕೆಗಳ ಕಾರ್ಯಾಚರಣೆ ಕೇಂದ್ರ ಸೇರಿದಂತೆ ವಿವಿಧ ಕಾಮಗಾರಿಗಳ ಮಾಹಿತಿಗಳನ್ನು ಅವರು ನೌಕಾನೆಲೆಯ ಅಧಿಕಾರಗಳಿಂದ ಪಡೆದುಕೊಂಡಿದ್ದರು.

ನೌಕಾನೆಲೆಯ ವಿವಿಧ ಪ್ರದೇಶಗಳಿಗೂ ಭೇಟಿ ನೀಡಿದ್ದ ಅವರು, ವಿವಿಧ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದ್ದರು. ನೌಕಾನೆಲೆಯ ಜಟ್ಟಿಯಲ್ಲಿ ನೌಕೆಯನ್ನು ಮೇಲೆತ್ತುವ ಸೌಲಭ್ಯವನ್ನು ಅವರಿಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಗಿತ್ತು. ಇದೇವೇಳೆ, ನೌಕಾನೆಲೆ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿ ಜೊತೆ ಸಂವಾದ ನಡೆಸಿದ್ದರು. ಅವರಿಗೆ ನೌಕಾದಳದ ಪ‍ಶ್ಚಿಮ ವಿಭಾಗದ ಮುಖ್ಯ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ವೈಸ್ ಅಡ್ಮಿರಲ್ ಆರ್.ಹರಿಕುಮಾರ್ ಜೊತೆಯಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.