ADVERTISEMENT

ಹೊನ್ನಾವರ | ಚೆಕ್ ಬೌನ್ಸ್: ಆರೋಪಿಗೆ ದಂಡ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2023, 15:11 IST
Last Updated 4 ನವೆಂಬರ್ 2023, 15:11 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಹೊನ್ನಾವರ: ಇಲ್ಲಿಯ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿ.ಎಲ್.ಡಿ.) ಗೆ ಸಾಲಗಾರರೋರ್ವರು ನೀಡಿದ್ದ ಚೆಕ್ ಬೌನ್ಸ್ ಆಗಿರುವ ಪ್ರಕರಣದ ವಿಚಾರಣೆ ನಡೆಸಿದ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಭಣಕಾರ ಶನಿವಾರ ತೀರ್ಪು ನೀಡಿದ್ದು, ಸಾಲಗಾರ ಆರೋಪಿಗೆ ₹1.39 ಲಕ್ಷ ದಂಡ ಹಾಗೂ ದಂಡ ತುಂಬಲು ತಪ್ಪಿದಲ್ಲಿ 6 ತಿಂಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.

ತುಳಸಿನಗರದ ವೆಂಕಟೇಶ ನಾರಾಯಣ ಮೇಸ್ತ ಶಿಕ್ಷೆಗೊಳಗಾದ ಅಪರಾಧಿ. ವೆಂಕಟೇಶ ಸಾಲದ ಮರುಪಾವತಿಯ ಸಂದರ್ಭದಲ್ಲಿ ಬ್ಯಾಂಕ್‌ಗೆ ನೀಡಿದ್ದ ಚೆಕ್ ಅಮಾನ್ಯಗೊಂಡಿದ್ದರಿಂದ ಅವರ ವಿರುದ್ಧ ಬ್ಯಾಂಕಿನ ಅಧಿಕಾರಿಗಳು ದೂರು ನೀಡಿದ್ದರು.

ADVERTISEMENT

ವಕೀಲರಾದ ಜಿ.ಎಸ್.ಹೆಗಡೆ ಹಾಗೂ ಎ.ಆರ್.ನಾಯ್ಕ ಬ್ಯಾಂಕ್‌ನ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.