ಯಲ್ಲಾಪುರ: ʻಆದರ್ಶ ಮಕ್ಕಳು ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ಪರಿಚಯಿಸುವ ರಾಯಭಾರಿಗಳುʼ ಎಂದು ಸರ್ವೋದಯ ಶಿಕ್ಷಣ ಸಮಿತಿಯ ಗೌರವ ಕಾರ್ಯದರ್ಶಿ ಅಪ್ಪಣ್ಣ ಭಟ್ಟ ಬೆಣ್ಣೆಜಡ್ಡಿ ಹೇಳಿದರು.
ತಾಲ್ಲೂಕಿನ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ʻಜೀವನದ ಒತ್ತಡಗಳ ನಡುವೆ ನಾವು ಗುರು ಹಿರಿಯರ ಸಂಬಂಧ, ಮಹತ್ವ ಮರೆಯುತ್ತಿದ್ದೇವೆ. ಮನೆಯಲ್ಲಿನ ಸಂಸ್ಕಾರಗಳು ಸಮಾಜದ ಕಣ್ಣಿಗೆ ಕಾಣಸಿಗುತ್ತವೆʼ ಎಂದರು.
ಮುಖ್ಯಾಧ್ಯಾಪಕ ಎಂ.ಕೆ. ಭಟ್ಟ ಅಧ್ಯಕ್ಷತೆ ವಹಿಸಿ ಮಾತನಾಡಿ,ʻ ಪಾಲಕರು ನಿರಂತರವಾಗಿ ಶಿಕ್ಷಕರ ಜೊತೆ ವಿಚಾರ ವಿನಿಮಯ ಮಾಡುತ್ತಿದ್ದರೆ ಮಕ್ಕಳ ಫಲಿತಾಂಶದಲ್ಲಿ ಉತ್ತಮ ಸಾಧನೆ ಕಾಣಬಹುದು. ಸತತವಾದ ಪರಿಶ್ರಮದಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ಕಲಿಕೆ ಒಂದು ತಪಸ್ಸು ಆಗಬೇಕುʼ ಎಂದರು.
ಸಂಗೀತ ಶಿಕ್ಷಕ ಮಂಜುನಾಥ ಹಿರೇಮಠ, ಶಿಕ್ಷಕ ಗಿರೀಶ ಹೆಬ್ಬಾರ್ ಇದ್ದರು. ವೈಷ್ಣವಿ ಮತ್ತು ಗೌತಮಿ ಕೋಮಾರ ಶಿಕ್ಷಕರನ್ನು ಸನ್ಮಾನಿಸಿ ಗೌರವವನ್ನು ಅರ್ಪಿಸಿದರು. ವೆಂಕಟ್ರಮಣ ಕೋಮಾರ ಸ್ವಾಗತಿಸಿದರು. ಮೇಘಾ ಕೋಮಾರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.