ಗೋಕರ್ಣ: ಇಲ್ಲಿಯ ಪುರಾಣ ಪ್ರಸಿದ್ಧ ಮಾಣೇಶ್ವರ ದೇವಾಲಯದ ಮೇಲ್ಭಾಗದ ಗುಡ್ಡ ಗುರುವಾರ ಬೆಳಗಿನ ಜಾವ ಕುಸಿದು ಬಿದ್ದಿದೆ. ಅದೃಷ್ಟವಶಾತ್ ದೇವಾಲಯಕ್ಕೆ ಯಾವುದೇ ಹಾನಿಯಾಗಿಲ್ಲ.
ಗುಡ್ಡದ ಮಣ್ಣು ಸ್ವಲ್ಪ ಎಡಭಾಗಕ್ಕೆ ಜಾರಿದರೆ ದೇವಸ್ಥಾನದ ಮೇಲೆ ಬೀಳುತ್ತಿತ್ತು. ಬಲಭಾಗಕ್ಕೆ ಜಾರಿದರೆ ನೂರು ಅಡಿ ಆಳದಲ್ಲಿ ಮನೆಯ ಮೇಲೆ ಬೀಳುತ್ತಿತ್ತು. ಆದರೆ, ಗುಡ್ಡದ ಕೆಳ ಭಾಗದಲ್ಲಿ ಬಲವಾದ ಹೊನ್ನೆಯ ಮರವಿದ್ದ ಕಾರಣ ಬೃಹದಾಕಾರದ ಕಲ್ಲುಬಂಡೆ ಎಲ್ಲೂ ಬೀಳದೆ ಮಧ್ಯದಲ್ಲಿಯೇ ಜಾರಿ ನಿಂತಿದೆ.
ಫೋಟೊ ಪಾಯಿಂಟ್: ಉರುಳಿ ಬಿದ್ದ ಬಂಡೆ ಫೋಟೊ ಪ್ರಿಯರಿಗೆ ನೆಚ್ಚಿನ ಸ್ಥಳವಾಗಿತ್ತು. ಅತ್ಯಂತ ಎತ್ತರದ ಸ್ಥಳವಾಗಿದ್ದು ಗುಡ್ಡೆಯ ತುದಿ ಭಾಗವಾಗಿತ್ತು. ಇಲ್ಲಿಂದ ನೇರವಾಗಿ ಸಮುದ್ರವೇ ಕಾಣುತ್ತಿತ್ತು. ಸೂರ್ಯಾಸ್ತವಂತೂ ಅತ್ಯಂತ ರಮಣೀಯವಾಗಿ ಕಾಣುತ್ತಿತ್ತು. ಬೆಳಗಿನ ಜಾವ ಬಿದ್ದ ಕಾರಣ ಯಾರಿಗೂ ಯಾವುದೇ ಹಾನಿಯಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.