ADVERTISEMENT

ದಾಂಡೇಲಿ: ಪಡಿತರ ಚೀಟಿ ರದ್ದು ಪಡಿಸುವ ಸರ್ಕಾರದ ನೀತಿಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 15:28 IST
Last Updated 24 ಆಗಸ್ಟ್ 2024, 15:28 IST

ದಾಂಡೇಲಿ: ಸರ್ಕಾರವು ತಾನು ನಿಗದಿಪಡಿಸಿದ ಆದಾಯ ಮಿತಿ ಮೀರುತ್ತದೆಂಬ ನೆಪಗಳನ್ನು ಮುಂದಿಟ್ಟುಕೊಂಡು ಬಡ ಸಾಮಾನ್ಯ ಅಸಂಘಟಿತ ಕಾರ್ಮಿಕರಿಗೆ ನ್ಯಾಯಬೆಲೆ ಅಂಗಡಿಯಲ್ಲಿ ದೊರಕುವ ಎಲ್ಲ ಪಡಿತರ ವಸ್ತುಗಳು ಮತ್ತು ಗ್ಯಾರಂಟಿ ಯೋಜನೆಗಳ ಸೌಲಭ್ಯಗಳನ್ನು ತಪ್ಪಿಸಲು ಮುಂದಾಗಿರುವ ಕ್ರಮವನ್ನು ಸಿಐಟಿಯು ದಾಂಡೇಲಿ ತಾಲ್ಲೂಕು ಸಮಿತಿ ಮತ್ತು ಪೌರ ಕಾರ್ಮಿಕರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.

ಸಂಘಟನೆ ಅಧ್ಯಕ್ಷ ಡಿ.ಸ್ಯಾಮ್ಸನ್ಸ್‌, ಪೌರ, ಕಾರ್ಖಾನೆಯ ಕ್ಯಾಜುಯಲ್ ಮತ್ತು ಗುತ್ತಿಗೆ ಕಾರ್ಮಿಕರು, ವಿವಿಧ ವಿಭಾಗದ ಅಸಂಘಟಿತ ಕಾರ್ಮಿಕರುಗಳಿಗೆ ರಾಜ್ಯ ಸರ್ಕಾರ ಕುಟುಂಬಕ್ಕೆ ನೀಡಿದ ರೇಷನ್ ಕಾರ್ಡನ್ನು ಕಸಿಯಬಾರದೆಂದು, ಕೇಂದ್ರ ಸರ್ಕಾರದ ಆದಾಯ ನೀತಿ ಮರುಪರಿಶೀಲನೆ ಮಾಡಬೇಕೆಂದು ಸಿಐಟಿಯು ಆಗ್ರಹಿಸುತ್ತದೆ.

ಈಗಾಗಲೇ ಬಡ ಜನಸಾಮಾನ್ಯ ಅಸಂಘಟಿತ ಕಾರ್ಮಿಕರು ಬೆಲೆ ಏರಿಕೆ ಹಾಗೂ ಇತರ ಆರ್ಥಿಕ ನೀತಿಗಳಿಂದ ಬದುಕುವ ಹಕ್ಕಿನಿಂದಲೇ ವಂಚಿತರಾಗುತ್ತಿದ್ದಾರೆ.

ADVERTISEMENT

ಸಿಐಟಿಯು ತಾಲ್ಲೂಕು ಸಂಚಾಲಕರಾದ ಸಲೀಂ ಸಯ್ಯದ ಹಾಗೂ ಪೌರ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಡಿ. ಸ್ಯಾಮ್ಸನ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.