ADVERTISEMENT

ಕಾಂಗ್ರೆಸ್‍ನದ್ದು ರಾಜಕೀಯ ಪಾದಯಾತ್ರೆ: ಸಚಿವ ಕೋಟ

ಸಚಿವ ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2022, 15:53 IST
Last Updated 1 ಅಕ್ಟೋಬರ್ 2022, 15:53 IST
ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ   

ಶಿರಸಿ: ‘ಕಾಶ್ಮೀರದ ವಿಶೇಷಾಧಿಕಾರ ರದ್ದುಪಡಿಸಿ ದೇಶದ ಸಂವಿಧಾನ ಪಾಲನೆಗೆ ದಾರಿ ಮಾಡಿಕೊಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದು ನಿಜವಾದ ಭಾರತ ಒಗ್ಗೂಡಿಸುವ ಕೆಲಸ. ರಾಹುಲ್ ಗಾಂಧಿ ಮಾಡುತ್ತಿರುವುದು ರಾಜಕೀಯ ಪಾದಯಾತ್ರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದರು.

ಇಲ್ಲಿ ಶನಿವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, ‘ಭಾರತ ಒಗ್ಗೂಡಿಸುವ ಸ್ಪಷ್ಟ ಯೋಚನೆ ಮೋದಿ ಅವರಲ್ಲಿದೆ. ಕಾಂಗ್ರೆಸ್ ವಿರೋಧ ಪಕ್ಷವಾಗಿ ರಾಜಕೀಯ ಲಾಭಕ್ಕೆ ಪಾದಯಾತ್ರೆ ಮಾಡುತ್ತಿದೆಯೆ ವಿನಃ ಭಾರತ ಒಗ್ಗೂಡಿಸುವ ಉದ್ದೇಶಕ್ಕಲ್ಲ’ ಎಂದರು.

‘ದೇಶದ ಮೊದಲ ಪ್ರಧಾನಿ ನೆಹರೂ ಅವರು ಆರ್.ಎಸ್.ಎಸ್. ಅನ್ನು ದೇಶಭಕ್ತ ಸಂಘಟನೆ ಎಂದು ಶ್ಲಾಘಿಸಿದ್ದರು. ಸಂಘ ಪರಿವಾರ ಟೀಕಿಸುವಈಗಿನ ಕಾಂಗ್ರೆಸ್ಸಿಗರು ಅದನ್ನು ಅರ್ಥಮಾಡಿಕೊಳ್ಳಬೇಕಿದೆ’ ಎಂದರು.

ADVERTISEMENT

‘ಅಡಿಕೆ ಆಮದಿಗೆ ಅವಕಾಶ ನೀಡಿರುವ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಸಾಧಕ–ಬಾಧಕ ಗಮನಿಸಿ ಗೃಹ ಸಚಿವರೂ ಆಗಿರುವ ಆರಗ ಜ್ಞಾನೇಂದ್ರ ಅವರ ನೇತೃತ್ವದ ನಿಯೋಗ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.