ADVERTISEMENT

ಕಾರವಾರ: ಮಹಿಳಾ ಕಾಂಗ್ರೆಸ್‌ಗೆ ಸೀಮಾ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 4:53 IST
Last Updated 1 ಸೆಪ್ಟೆಂಬರ್ 2025, 4:53 IST
ಮಹಿಳಾ ಕಾಂಗ್ರೆಸ್ ಕಾರವಾರ ಘಟಕದ ನೂತನ ಪದಾಧಿಕಾರಿಗಳು
ಮಹಿಳಾ ಕಾಂಗ್ರೆಸ್ ಕಾರವಾರ ಘಟಕದ ನೂತನ ಪದಾಧಿಕಾರಿಗಳು   

ಕಾರವಾರ: ಕಾಂಗ್ರೆಸ್ ಮಹಿಳಾ ವಿಭಾಗದ ತಾಲ್ಲೂಕು ಘಟಕದ ಅಧ್ಯಕ್ಷೆಯಾಗಿ ಸೀಮಾ ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ.

ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಮಹಿಳಾ ವಿಭಾಗದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಶಾಸಕ ಸತೀಶ ಸೈಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಕಲ್ಗುಟ್ಕರ್ ನಿರ್ದೇಶನ ಆಧರಿಸಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಗೌರವ ಅಧ್ಯಕ್ಷೆಯಾಗಿ ಸುಮಂಗಲಾ ಹನೇಹಳ್ಳಿ, ಉಪಾಧ್ಯಕ್ಷರಾಗಿ ಗೀತಾ ಗುನಗಿ, ದಿಲ್‌ಶಾದ್ ಕುಟ್ಟಿ, ಲೀಲಾಬಾಯಿ ಠಾಣೇಕರ, ಪ್ರಧಾನ ಕಾರ್ಯದರ್ಶಿಯಾಗಿ ಶ್ವೇತಾ ನಾಯ್ಕ, ಸಹ ಕಾರ್ಯದರ್ಶಿಯಾಗಿ ಎಲ್ಫಿನಾ ಫರ್ನಾಂಡಿಸ್, ಸನಾ ಮಾಂಗ್ರೇಕರ್, ಸುಹಾನಿ ಪಾಟೀಲ, ಖಜಾಂಚಿಯಾಗಿ ಸುಲಕ್ಷಾ ಬಾನಾವಳಿ ಅವರನ್ನು ನೇಮಕ ಮಾಡಲಾಯಿತು. ಜೊತೆಗೆ ಕಾರ್ಯಕಾರಿ ಸಮಿತಿಗೆ 16 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.