ಕಾರವಾರ: ಕಿಡ್ನಿ ವೈಫಲ್ಯದಿಂದಮೃತಪಟ್ಟ ತಾಯಿಯ ಶವ ಸಂಸ್ಕಾರಕ್ಕೆ ಸೀಬರ್ಡ್ ನೌಕಾಪಡೆಯ ಸಿಬ್ಬಂದಿಯೊಬ್ಬರು ಮಂಗಳವಾರ ತಡರಾತ್ರಿಪರದಾಡಿದರು.
ಎರಡು ಸ್ಮಶಾನಗಳಿಗೆ ತೆರಳಿದರೂ ಸ್ಥಳೀಯರುವಿರೋಧಿಸಿದರು. ಕೊನೆಗೆ, ಪೊಲೀಸರು ಮತ್ತು ಸಂಘಟನೆಗಳ ಸಹಾಯ ಪಡೆದು ಕಾರವಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರು.
ಜಾರ್ಖಂಡ್‌ನಸುಮಿತ್ ಕುಮಾರ್ ಸೆಹಗಲ್ ಅವರ ತಾಯಿ ಅನಿತಾ ದೇವಿ (48), ನೌಕಾನೆಲೆಯ ಪತಂಜಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಮಂಗಳವಾರ ರಾತ್ರಿ ಮೃತಪಟ್ಟಿದ್ದರು. ಲಾಕ್‌ಡೌನ್ ಕಾರಣದಿಂದ ಮೃತದೇಹವನ್ನು ಹುಟ್ಟೂರಿಗೆ ತೆಗೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ.
ಹಾಗಾಗಿ ಪಾರ್ಥಿವ ಶರೀರವನ್ನು ನೌಕಾನೆಲೆಯ ಸಮೀಪದ ಅರಗಾ ಸ್ಮಶಾನಕ್ಕೆ ತೆಗೆದುಕೊಂಡು ಹೋದರು. ಅಲ್ಲಿನ ಕೆಲವರು, ಎಲ್ಲೆಡೆ ಕೊರೊನಾ ವೈರಸ್ ಹರಡಿದ್ದು, ತಮ್ಮೂರಿನ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡದಂತೆ ತಿಳಿಸಿದರು. ಹಾಗಾಗಿ ಸುಮಿತ್ ಕುಮಾರ್, ತಾಯಿಯ ಮೃತದೇಹದೊಂದಿಗೆ ಚೆಂಡಿಯಾದ ಸ್ಮಶಾನಕ್ಕೆ ಹೋದರು. ಅಲ್ಲಿ ಅಂತ್ಯಸಂಸ್ಕಾರಕ್ಕೆ ಸ್ಥಳೀಯಗ್ರಾಮ ಪಂಚಾಯ್ತಿಯಿಂದ ಅನುಮತಿಯನ್ನೂ ಪಡೆದಿದ್ದರು. ತಾಯಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ನೆಗೆಟಿವ್ ಬಂದಿದೆ ಎಂದು ತಿಳಿಸಿದರೂ ಅಲ್ಲಿನ ಸ್ಥಳೀಯರುವಿರೋಧಿಸಿದರು.
ವಿಚಾರ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು, ಊರಿನವರಮನವೊಲಿಸಲು ಪ್ರಯತ್ನಿಸಿದರೂಪ್ರಯೋಜನವಾಗಲಿಲ್ಲ. ಕೊನೆಗೆ ಪೊಲೀಸರು, ಅಧಿಕಾರಿಗಳು ಮತ್ತು ಜನಶಕ್ತಿ ವೇದಿಕೆಯ ಮುಖಂಡರ ಸಹಕಾರದಿಂದ ಕಾರವಾರದಕೋಡಿಬಾಗದ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಿದರು. ಚಿತಾಭಸ್ಮವನ್ನು ಜುಲೈ 9ರಂದು ಹುಟ್ಟೂರಿಗೆ ತೆಗೆದುಕೊಂಡು ಹೋಗಿ ಅಂತಿಮ ಕ್ರಿಯೆಗಳನ್ನು ನೆರವೇರಿಸಲು ಅವರು ಸಿದ್ಧತೆ ಮಾಡಿಕೊಂಡರು.
ಈ ಸಂದರ್ಭದಲ್ಲಿ ಡಿ.ವೈ.ಎಸ್.ಪಿ ಅರವಿಂದ ಕಲಗುಜ್ಜಿ, ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ಪ್ರಮುಖರಾದ ರಾಮ ನಾಯ್ಕ, ಬಾಬು ಶೇಖ್, ಅರವಿಂದ ಕೊಮಾರ ನಾಯ್ಕ, ವಿನಾಯಕ ಆಚಾರಿ, ಸುಧಾಕರ ಸದಾನಂದ ನಾಯ್ಕ, ನೌಕಾದಳದ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.