ADVERTISEMENT

ದಾಂಡೇಲಿ ಬಳಿ ಹೈನಾ ಓಡಾಟ! ಪಶ್ಚಿಮ ಘಟ್ಟದಲ್ಲಿ ಅಪರೂಪದ ಘಟನೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 7:52 IST
Last Updated 7 ನವೆಂಬರ್ 2025, 7:52 IST
<div class="paragraphs"><p>ಹೈನಾ </p></div>

ಹೈನಾ

   

ಕಾರವಾರ: ಬಯಲು ಸೀಮೆಯ ಕುರುಚಲು ಅರಣ್ಯದಲ್ಲಿ ಹೆಚ್ಚು ಕಾಣಸಿಗುವ ಪಟ್ಟೆ ಕತ್ತೆಕಿರುಬ (ಹೈನಾ) ದಾಂಡೇಲಿ ಸಮೀಪದ ಗಣೇಶಗುಡಿ, ಕುಳಗಿಯ ದಟ್ಟ ಅರಣ್ಯದಲ್ಲಿ ಕಾಣಿಸಿಕೊಂಡಿದೆ.

ಗಣೇಶಗುಡಿ ಮುಖ್ಯರಸ್ತೆಯ ಸೇತುವೆಯ ಬಳಿ ಎರಡು ದಿನಗಳ ಹಿಂದೆ ಪಟ್ಟೆ ಕತ್ತೆಕಿರುಬ ಓಡಾಟ ನಡೆಸಿರುವ ದೃಶ್ಯವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದು ಸ್ಥಳೀಯವಾಗಿ ಪಟ್ಟೆ ಕತ್ತೆಕಿರುಬ ಪತ್ತೆಯಾದ ದೃಶ್ಯ ಎಂಬುದನ್ನು ದಾಂಡೇಲಿ ವಲಯ ಅರಣ್ಯಾಧಿಕಾರಿ ನದಾಫ್ ಖಚಿತಪಡಿಸಿದ್ದಾರೆ. ಅ.18 ರಂದು ಕುಳಗಿ ಸಮೀಪದ ಅರಣ್ಯದಲ್ಲೂ ಇದೇ ಪ್ರಾಣಿ ಕಾಣಿಸಿಕೊಂಡಿತ್ತು ಎಂದು ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

‘ದಟ್ಟ ಅರಣ್ಯದಲ್ಲಿ ಕತ್ತೆಕಿರುಬಗಳು ವಾಸವಿರುವುದು ವಿರಳ. ಕಾಳಿ ಹುಲಿ ಸಂರಕ್ಷಿತಾರಣ್ಯಕ್ಕೆ ಸಮೀಪದಲ್ಲಿನ, ಹಳಿಯಾಳ ಭಾಗದ ಕುರುಚಲು ಅರಣ್ಯ ಪ್ರದೇಶಗಳಿಂದ ಕತ್ತೆಕಿರುಬ ವಲಸೆ ಹೋಗಿರುವ ಸಾಧ್ಯತೆ ಇದೆ. ಆದರೂ, ಪಶ್ಚಿಮ ಘಟ್ಟದಲ್ಲಿ ಕತ್ತೆಕಿರುಬ ಕಾಣಿಸಿಕೊಂಡಿರು ವುದು ಅಪರೂಪದ ಘಟನೆ’ ಎನ್ನುತ್ತಾರೆ ಕತ್ತೆಕಿರುಬಗಳ ಕುರಿತು ಅಧ್ಯಯನ ನಡೆಸುತ್ತಿರುವ ಗಿರಿಧರ ಕುಲಕರ್ಣಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.