ADVERTISEMENT

ದಾಂಡೇಲಿ ನಗರಸಭೆ: ₹ 54 ಲಕ್ಷ ಉಳಿತಾಯ ಬಜೆಟ್

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2024, 15:37 IST
Last Updated 13 ಮಾರ್ಚ್ 2024, 15:37 IST
ದಾಂಡೇಲಿಯ ನಗರಸಭೆ ಸಭಾಭವನದಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅಧ್ಯಕ್ಷತೆಯಲ್ಲಿ 2024-25ನೇ ಸಾಲಿನ ಬಜೆಟ್ ಮಂಡನೆ  ಸಭೆ ನಡೆಯಿತು
ದಾಂಡೇಲಿಯ ನಗರಸಭೆ ಸಭಾಭವನದಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅಧ್ಯಕ್ಷತೆಯಲ್ಲಿ 2024-25ನೇ ಸಾಲಿನ ಬಜೆಟ್ ಮಂಡನೆ  ಸಭೆ ನಡೆಯಿತು   

ದಾಂಡೇಲಿ: ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅಧ್ಯಕ್ಷತೆಯಲ್ಲಿ ಬುಧವಾರ ನಗರಸಭೆ ಸಭಾಭವನದಲ್ಲಿ ಸಾಮಾನ್ಯ ಸಭೆ ಹಾಗೂ 2024-25ನೇ ಸಾಲಿನ ವಾರ್ಷಿಕ ಆಯವ್ಯಯ ನಡೆಯಿತು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಹೀದಾ ಪಠಾಣ 2024 -25 ನೇ ಸಾಲಿನ ₹54.60 ಲಕ್ಷ ಉಳಿತಾಯದ ಬಜೆಟ್ ಮಂಡಿಸಿದರು. ನಗರಸಭೆ ಆಯ ರೂಪದಲ್ಲಿ ₹53,14,92,000 ಕೋಟಿ ಬಂದಿದ್ದು, ವ್ಯಯ ರೂಪದಲ್ಲಿ ₹52,60,32,000 ಆಗಿದ್ದು, ₹54.60 ಲಕ್ಷ ಉಳಿತಾಯವಾಗಿದೆ ಎಂದರು.

ಪೌರಾಯುಕ್ತ ರಾಜಾರಾಮ ಪವಾರ ಅನುಸರಣ ವರದಿ ವಾಚಿಸಿದರು.

ADVERTISEMENT

ಜಿಲ್ಲಾಧಿಕಾರಿ ಮಾತನಾಡಿ, ‘ಟೆಂಡರ್ ಪ್ರಕಾರ 11,000 ಮನೆಗಳನ್ನು ನಿರ್ಮಿಸಿ ಕೊಡಬೇಕಿತ್ತು ಆದರೆ, ಕೋವಿಡ್ ಕಾರಣದಿಂದ ವಿಳಂಬವಾಗಿದೆ.ಈಗ ಒಪ್ಪಿಂದದ ಪ್ರಕಾರ 384 ಪೂರ್ತಿ ಮಾಡಿಕೊಡಲು ಹೌಸಿಂಗ್ ಬೋರ್ಡ್ ಅಧಿಕಾರಿಗೆ ತಿಳಿಸಲಾಗಿದೆ .15 ದಿನಗಳ ಅಂತರದಲ್ಲಿ ಮನೆ ನಿರ್ಮಾಣ ಮಾಡುವುದಾಗಿ ಹೌಸಿಂಗ್ ಬೋರ್ಡ್ ಅಧಿಕಾರಿಗಳು ತಿಳಿಸಿದ್ದಾರೆ’ ಎಂದರು.

ಯುಜಿಡಿ ಚರಂಡಿ ಸಂಪರ್ಕಕ್ಕೆ ಸಂಬಂಧಿಸಿದಂತೆ ನಗರಸಭೆ ಸದಸ್ಯ ಮೋಹನ ಹಲವಾಯಿ, ಪ್ರತಿ ಮನೆಯಲ್ಲಿನ ಶೌಚಾಲಯಗಳಿಗೆ ಲೆಕ್ಕಾಚಾರದಲ್ಲಿ ತೆರಿಗೆ ವಿಧಿಸಲು ನಗರಸಭೆ ಮುಂದಾಗಿದೆ. ಒಂದೇ ಸಂಪರ್ಕಕ್ಕೆ ವಿವಿಧ ರೀತಿಯ ದರ ನಿಗದಿಪಡಿಸಿದರೆ ಗ್ರಾಹಕರಿಗೆ ತೊಂದರೆ ಆಗುತ್ತದೆ. ಇದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾಧಿಕಾರಿ ಒಂದೇ ದರ ನಿಗದಿ ಪಡಿಸುವಂತೆ ಪೌರಾಯುಕ್ತರಿಗೆ ತಿಳಿಸಿದರು.

ವಿದ್ಯಾರ್ಥಿ ವೇತನ ಹಂಚಿಕೆ ಕುರಿತಂತೆ ನಗರಸಭೆ ಸದಸ್ಯರಿಗೆ ಫಲಾನುಭವಿಗಳ ಆಯ್ಕೆ ಪಟ್ಟಿ ಹಾಗೂ ವಿಷಯವನ್ನು ನಗರಸಭೆ ಅಧಿಕಾರಿಗಳು ವಾಟ್ಸ್‌ಆ್ಯಪ್‌ ಮೂಲಕ ಮಾಹಿತಿ ನೀಡಿದ್ದಾರೆ.ಅ ದರ ಬದಲು ಮುದ್ರಿತ ಮಾಹಿತಿ ಪ್ರತಿಯನ್ನು ಪ್ರತಿ ವಾರ್ಡ್ ಸದಸ್ಯರಿಗೆ ನೀಡಬೇಕು. ಪ್ರತಿ ವಾರ್ಡ್‌ಗಳ ಫಲಾನುಭವಿಗಳು ಇದ್ದಾರೆ .ಒಂದೇ ವಾರ್ಡ್‌ನ ನಾಲ್ಕಾರು ಫಲಾನುಭವಿಗಳನ್ನು ಹೇಗೆ ಆಯ್ಕೆ ಮಾಡುತ್ತೀರಿ ಎಂದು ಆಕ್ಷೇಪಿಸಿದರು.

ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ಸೀಮಿತವಾದ ಅನುದಾನ ಇರುವ ಕಾರಣ ಅರ್ಹತೆ ಮೇಲೆ ಆಯ್ಕೆ ಮಾಡಲಾಗುವುದು. ಇನ್ನು ಮುಂದೆ ಇಂತಹ ಯೋಜನೆಗಳ ಮಾಹಿತಿಯನ್ನು ಪ್ರತಿ ಸದಸ್ಯರಿಗೆ ತಿಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಆಸ್ತಿ ತೆರಿಗೆ (ನಿವೇಶನ ವಾಣಿಜ್ಯ, ಕೈಗಾರಿಕೆ) ಸಂಬಂಧಿಸಿದಂತೆ ತೆರಿಗೆ ಪರಿಷ್ಕರಣೆ ಹಾಗೂ ಸರ್ವೆ ನಂಬರ್ 6 ಅರ 5 ಎಕರೆ ಜಾಗವನ್ನು ವಾಣಿಜ್ಯ ಉದ್ದೇಶಕ್ಕಾಗಿ ಭೂ ಪರಿವರ್ತನಾ ಆದೇಶದಂತೆ ನಿವೇಶನಗಳ ಕರಡು ನಕ್ಷೆ ಕುರಿತು ಚರ್ಚಿಸಲಾಯಿತು.ಘನ ತ್ಯಾಜ್ಯ ವಿಲೇವಾರಿ ಜೆಸಿಬಿ ಖರೀದಿಗೆ ಸಂಬಂಧಿಸಿದಂತೆ ಟೆಂಡರ್ ಕರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಗರಸಭೆ ಸದಸ್ಯರು, ವಿವಿಧ ವಿಭಾಗಗಳ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.