ADVERTISEMENT

ದಾಂಡೇಲಿ| ರೋಟರಿ ಕ್ಲಬ್‌ನ ಸೇವೆ ಶ್ಲಾಘನೀಯ: ಆರ್.ವಿ ದೇಶಪಾಂಡೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 7:31 IST
Last Updated 5 ಜನವರಿ 2026, 7:31 IST
ದಾಂಡೇಲಿ ನಗರದ ಜೆ.ಎನ್.ರಸ್ತೆಯಲ್ಲಿ ರೋಟರಿ ಕ್ಲಬ್ ವತಿಯಿಂದ ನೂತನವಾಗಿ ನಿರ್ಮಿಸಿರುವ ಬಸ್ ಶೆಲ್ಟರ್ ಅನ್ನು ಶಾಸಕ ಆರ್.ವಿ.ದೇಶಪಾಂಡೆ ಉದ್ಘಾಟಿಸಿದರು
ದಾಂಡೇಲಿ ನಗರದ ಜೆ.ಎನ್.ರಸ್ತೆಯಲ್ಲಿ ರೋಟರಿ ಕ್ಲಬ್ ವತಿಯಿಂದ ನೂತನವಾಗಿ ನಿರ್ಮಿಸಿರುವ ಬಸ್ ಶೆಲ್ಟರ್ ಅನ್ನು ಶಾಸಕ ಆರ್.ವಿ.ದೇಶಪಾಂಡೆ ಉದ್ಘಾಟಿಸಿದರು   

ದಾಂಡೇಲಿ: ನಗರದ ರೋಟರಿ ಕ್ಲಬ್ ಸಮಾಜಮುಖಿ ಸೇವೆಗೆ ಸದಾ ಮುಂದು. ಸಮುದಾಯ ಸೇವೆ ಮತ್ತು ಸಾರ್ವಜನಿಕ ಅನುಕೂಲಕ್ಕಾಗಿ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಾ ಬಂದಿದೆ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು

ನಗರದ ಜೆ.ಎನ್.ರಸ್ತೆಯಲ್ಲಿ ರೋಟರಿ ಕ್ಲಬ್ ವತಿಯಿಂದ ನಿರ್ಮಿಸಲಾದ ಬಸ್ ಶೆಲ್ಟರ್‌ ಅನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ, ಆರೋಗ್ಯ, ಶೈಕ್ಷಣಿಕ ಕ್ಷೇತ್ರಕ್ಕೆ ರೋಟರಿ ಕ್ಲಬ್ ನಿರಂತರವಾಗಿ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡುವ ಮೂಲಕ ಜನಸ್ನೇಹಿ ಸಂಸ್ಥೆಯಾಗಿ ಗಮನ ಸೆಳೆದಿದೆ. ನೂತನವಾಗಿ ಬಸ್ ಶೆಲ್ಟರ್‌ ಅನ್ನು ನಿರ್ಮಿಸಿರುವ ರೋಟರಿ ಕ್ಲಬ್ ನ ಸದಸ್ಯರಿಗೆ ಅಭಿನಂದನೆ ತಿಳಿಸಿದರು.

ADVERTISEMENT

ರೋಟರಿ ಕ್ಲಬ್ ಅಧ್ಯಕ್ಷ ಅಶುತೋಷ್ ಕುಮಾರ್ ರಾಯ್ ಮಾತನಾಡಿ, ರೋಟರಿ ಕ್ಲಬ್ ಸಮಾಜಕ್ಕೆ ಉಪಯುಕ್ತವಾದ ಕಾರ್ಯ ಚಟುವಟಿಕೆಗಳಿಗೆ ಆದ್ಯತೆ ನೀಡಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಬಸ್ ಶೆಲ್ಟರ್‌ ಅನ್ನು ಎಲ್ಲರ ಸಹಕಾರದಿಂದ ನಿರ್ಮಿಸಲಾಗಿದೆ ಎಂದರು.

ರೋಟರಿ ಕ್ಲಬ್ ಕಾರ್ಯದರ್ಶಿ ಮಿಥುನ್ ನಾಯಕ, ಇವೆಂಟ್ ಅಧ್ಯಕ್ಷ ಆರ್.ಪಿ.ನಾಯ್ಕ, ರೋಟರಿ ಕ್ಲಬ್ ನ ಗಣೇಶ ಕಾಮತ್, ರಾಜೇಶ ವೆರ್ಣೇಕರ, ರಾಹುಲ್ ಬಾವಾಜಿ, ಸೋಮಕುಮಾರ್.ಎಸ್, ರಾಜೇಶ ತಿವಾರಿ, ಅಭಿಷೇಕ್ ಕನ್ಯಾಡಿ, ಇಮಾಮ್ ಸರ್ವರ್, ರವಿಕುಮಾರ್.ಜಿ. ನಾಯಕ, ವೆಂಕಟೇಶ್ ಪಾಂಡೆ, ರಾಧೇಶ್ಯಾಮ್ ರಾಥಿ, ಕ್ಸೇವಿಯರ್ ಡಿ'ಸಿಲ್ವಾ, ವೈದ್ಯರಾದ ಜ್ಞಾನದೀಪ್ ಗಾಂವಕರ, ವಿಜಯ್ ತೇಲಿ ಇದ್ದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ, ಪೌರಾಯುಕ್ತ ವಿವೇಕ ಬನ್ನೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ನಗರಸಭೆಯ ನಿಕಟ ಪೂರ್ವ ಅಧ್ಯಕ್ಷ ಅಷ್ಪಾಕ್ ಶೇಖ, ಪಿಎಸ್ಐ ಅಮೀನ್ ಅತ್ತಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.