
ಪ್ರಜಾವಾಣಿ ವಾರ್ತೆರೈಲು
– ಪ್ರಜಾವಾಣಿ ಚಿತ್ರ
ಕಾರವಾರ: ದಾಂಡೇಲಿ ರೈಲು ಸಂಚಾರಕ್ಕೆ ಫೆ.7ರಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಚಾಲನೆ ನೀಡಲಿದ್ದಾರೆ.
‘ಅಳ್ನಾವರ ಮಾರ್ಗವಾಗಿ ದಾಂಡೇಲಿಗೆ ಸಂಚರಿಸುತ್ತಿದ್ದ ರೈಲು ಕೋವಿಡ್ ಕಾಲದಲ್ಲಿ ಸ್ಥಗಿತಗೊಂಡಿತ್ತು. ಇಲ್ಲಿನ ಜನರ ಬಹುಬೇಡಿಕೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿತ್ತು. ಸ್ಪಂದಿಸಿದ ಸರ್ಕಾರ ರೈಲ್ವೆ ಮರು ಸಂಚಾರಕ್ಕೆ ಅನುಕೂಲ ಕಲ್ಪಿಸಿದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
‘ಫೆ.7ರಂದು ಸಂಜೆ 4 ಗಂಟೆಗೆ ಸಚಿವ ವಿ.ಸೋಮಣ್ಣ ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.