ADVERTISEMENT

ಕಾರವಾರ: ಒಳಮೀಸಲಾತಿಗೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2024, 13:43 IST
Last Updated 12 ಸೆಪ್ಟೆಂಬರ್ 2024, 13:43 IST
ಪರಿಶಿಷ್ಟ ಸಮುದಾಯಗಳಲ್ಲಿರುವ ಉಪಪಂಗಡಗಳಿಗೆ ಒಳಮೀಸಲಾತಿಗೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದಿಂದ ಗುರುವಾರ ಕಾರವಾರದಲ್ಲಿ ಪ್ರತಿಭಟನೆ ನಡೆಸಲಾಯಿತು
ಪರಿಶಿಷ್ಟ ಸಮುದಾಯಗಳಲ್ಲಿರುವ ಉಪಪಂಗಡಗಳಿಗೆ ಒಳಮೀಸಲಾತಿಗೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದಿಂದ ಗುರುವಾರ ಕಾರವಾರದಲ್ಲಿ ಪ್ರತಿಭಟನೆ ನಡೆಸಲಾಯಿತು   

ಕಾರವಾರ: ಪರಿಶಿಷ್ಟ ಸಮುದಾಯಗಳಲ್ಲಿರುವ ಉಪ ಪಂಗಡಗಳಿಗೆ ಒಳಮೀಸಲಾತಿಗೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮಿತ್ರ ಸಮಾಜ ಮೈದಾನದಿಂದ ಮೆರವಣಿಗೆ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು. ಪರಿಶಿಷ್ಟ ಸಮುದಾಯಗಳಲ್ಲಿನ 106ಕ್ಕೂ ಹೆಚ್ಚು ಉಪ ಪಂಗಡಗಳಿಗೆ ಸರ್ಕಾರ ಸೂಕ್ತ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.

‘ಒಳಮೀಸಲಾತಿ ಜಾರಿಗೊಳಿಸುವಂತೆ ಸುಪ್ರಿಂಕೋರ್ಟ್ ಈಗಾಗಲೆ ಆದೇಶಿಸಿದೆ. ಈವರೆಗೂ ರಾಜ್ಯದಲ್ಲಿ ಆದೇಶ ಪಾಲನೆ ಆಗಿಲ್ಲ. ಇದರಿಂದ ಹಲವು ಉಪ ಪಂಗಡಗಳು ಮೀಸಲಾತಿ ಸೌಲಭ್ಯದಿಂದ ವಂಚಿತವಾಗುವಂತಾಗಿದೆ. ಕೇವಲ ಬಲಾಢ್ಯ ಗುಂಪುಗಳಿಗೆ ಮಾತ್ರ ಮೀಸಲಾತಿ ಸೌಲಭ್ಯ ದೊರೆಯುತ್ತಿದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ADVERTISEMENT

‘ಒಳಮೀಸಲಾತಿ ಸೌಲಭ್ಯ ಇಲ್ಲದ ಪರಿಣಾಮ ಸರ್ಕಾರದ ಸೌಲಭ್ಯಗಳನ್ನು ಬಲಸಿಕೊಳ್ಳುವಲ್ಲಿ ಉಪಜಾತಿಗಳು ಹಿಂದೆ ಬಿದ್ದಿವೆ. ಆರ್ಥಿಕವಾಗಿ, ಸಾಮಾಜಿಕವಾಗಿಯೂ ತೀರಾ ಹಿಂದುಳಿದಿವೆ. ಈ ಜಾತಿಗಳ ಜನರನ್ನು ಮುನ್ನೆಲೆಗೆ ತರಲು ಒಳಮೀಸಲಾತಿ ಅಗತ್ಯವಿದೆ’ ಎಂದು ಒತ್ತಾಯಿಸಿದರು.

ಸಮಿತಿಯ ಜಿಲ್ಲಾ ಘಟಕದ ಸಂಚಾಲಕ ಗೋಪಾಲ ನಡಕಿನಮನಿ, ಸಂತೋಷ ಕಟ್ಟಿಮನಿ, ನಾಗರಾಜ ದೊಡ್ಡಮನಿ, ಹನುಮಂತ ಮೇತ್ರಿ, ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.