ADVERTISEMENT

ದಾಂಡೇಲಿ: 'ಅಭಿವೃದ್ಧಿ ಯೋಜನೆಗಳಿಂದ ಪರಿಸರ ಹಾನಿ'

ಉತ್ತರ ಕನ್ನಡ ಜಿಲ್ಲಾ 25ನೇ ಕನ್ನಡ ಸಾಹಿತ್ಯ ಸಮ್ಮೇಳನ: ವಿ.ಎನ್. ನಾಯಕ ಅಭಿಮತ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 2:22 IST
Last Updated 15 ಡಿಸೆಂಬರ್ 2025, 2:22 IST
ದಾಂಡೇಲಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರ ನಡೆದ ‘ಮಾತು–ಮಥನ: ಯೋಜನೆಗಳು ಮತ್ತು ಸಾಧಕ–ಬಾಧಕಗಳು’ ಗೋಷ್ಠಿಯಲ್ಲಿ ಕವಿವಿ ನಿವೃತ್ತ ಪ್ರಾಧ್ಯಾಪಕ ವಿ.ಎನ್. ನಾಯಕ ಮಾತನಾಡಿದರು 
ದಾಂಡೇಲಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರ ನಡೆದ ‘ಮಾತು–ಮಥನ: ಯೋಜನೆಗಳು ಮತ್ತು ಸಾಧಕ–ಬಾಧಕಗಳು’ ಗೋಷ್ಠಿಯಲ್ಲಿ ಕವಿವಿ ನಿವೃತ್ತ ಪ್ರಾಧ್ಯಾಪಕ ವಿ.ಎನ್. ನಾಯಕ ಮಾತನಾಡಿದರು    

ದಾಂಡೇಲಿ: ‘ಉತ್ತರ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುವ ಅನೇಕ ಅಭಿವೃದ್ದಿ ಯೋಜನೆಗಳು ಪರಿಸರಕ್ಕೆ ಹಾನಿಕಾರಕ ಎಂಬುದು ಸ್ಪಷ್ಟವಾಗಿದೆ’ ಎಂದು ನಿವೃತ್ತ ಪ್ರಾಧ್ಯಾಪಕ ವಿ.ಎನ್. ನಾಯಕ ಅಭಿಪ್ರಾಯಪಟ್ಟರು.

ನಗರದಲ್ಲಿ ನಡೆಯುತ್ತಿರುವ ಉತ್ತರ ಕನ್ನಡ ಜಿಲ್ಲಾ 25ನೇ ಕನ್ನಡ ಸಾಹಿತ್ಯ ಸಮ್ಮೇಳನದ ‘ಮಾತು–ಮಥನ: ಯೋಜನೆಗಳು ಮತ್ತು ಸಾಧಕ–ಬಾಧಕಗಳು’ ಗೋಷ್ಠಿಯಲ್ಲಿ ಮಾತನಾಡಿದರು.

ಕಾಳಿ ನದಿ ಯೋಜನೆ ಆರಂಭದ ವೇಳೆ ಸೂಪಾ ತಾಲ್ಲೂಕಿನ ಹಲವು ಹಳ್ಳಿಗಳಿಗೆ ಹಾನಿಯಾಯಿತು. ಜಿಲ್ಲೆಯಲ್ಲಿ ಉತ್ಪಾದನೆಯಾಗುವ ವಿದ್ಯುತ್ ಕಡಿಮೆ ದರದಲ್ಲಿ ಗೋವಾ ರಾಜ್ಯಕ್ಕೆ ಹೋಗುತ್ತಿದೆ. ಹೀಗಿರುವಾಗ ಜಿಲ್ಲೆಯ ಪರಿಸರ, ಆಸ್ತಿ ಹಾಗೂ ಮೂಲಸೌಕರ್ಯ ಕಳೆದುಕೊಳ್ಳಬೇಕೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ’ ಎಂದು ಹೇಳಿದರು.

ADVERTISEMENT

ಪ್ರಮೋದ ಹರಿಕಾಂತ ಮಾತನಾಡಿ, ‘ಯೋಜನೆಗಳಿಂದ ಮಲೆನಾಡಿನ ಪ್ರದೇಶಗಳಿಗೆ ಹಾನಿ ಹೆಚ್ಚಾಗಿದ್ದು, ಕರಾವಳಿ ಭಾಗಕ್ಕೆ ಲಾಭವಾಗುತ್ತಿದೆ. ಕೈಗಾರಿಕೆಗಳ ಸಿಎಸ್ಆರ್ ನಿಧಿ ಸ್ಥಳೀಯ ಅಭಿವೃದ್ಧಿಗೆ ಬಳಕೆಯಾಗದೆ, ಸರ್ಕಾರಿ ಕಚೇರಿಗಳಿಗೆ ವಾಹನ ಹಾಗೂ ಗಣಕಯಂತ್ರ ಒದಗಿಸಲು ಸೀಮಿತವಾಗುತ್ತಿದೆ. ಇದರಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ’ ಎಂದರು.

ವಿಠ್ಠಲ ಕೋರ್ವೇಕರ, ರವಿ ರೇಡ್ಕರ, ಡಾ.ಬಿ.ಪಿ. ಮಹೇಂದ್ರಕುಮಾರ, ಪಿ.ನಾಗೇಂದ್ರ ಹಾಗೂ ಪ್ರಶಾಂತ ಮೂಡಲಮನೆ ಅವರು ಕಾಳಿ ಕಣಿವೆಯ ಪ್ರವಾಸೋದ್ಯಮ, ಕೈಗಾರಿಕೆಯ ಸಾಧಕ ಬಾಧಕಗಳನ್ನು ಮಂಡಿಸಿದರು. ಸುಬ್ರಾಯ ಭಟ್ಟ ಬಕ್ಕಳ ಸ್ವಾಗತಿಸಿದರು. ಸುಮಂಗಲಾ ಹನಮರೆಡ್ಡಿ ವಂದಿಸಿದರು. ಸಂದೇಶ್ ಜೈನ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.