ADVERTISEMENT

ನಾಯಿ ದಾಳಿ: ಜಿಂಕೆ ಮರಿ ಸಾವು

​ಪ್ರಜಾವಾಣಿ ವಾರ್ತೆ
Published 7 ಮೇ 2020, 13:57 IST
Last Updated 7 ಮೇ 2020, 13:57 IST
ಕುಮಟಾ ಸಮೀಪದ ಚಂದಾವರ ಅರಣ್ಯ ವ್ಯಾಪ್ತಿಯಲ್ಲಿ ನಾಯಿಗಳ ದಾಳಿಯಿಂದ ಮೃತಪಟ್ಟ ಜಿಂಕೆ ಮರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಅಂತ್ಯಸಂಸ್ಕಾರ ಮಾಡಿದರು
ಕುಮಟಾ ಸಮೀಪದ ಚಂದಾವರ ಅರಣ್ಯ ವ್ಯಾಪ್ತಿಯಲ್ಲಿ ನಾಯಿಗಳ ದಾಳಿಯಿಂದ ಮೃತಪಟ್ಟ ಜಿಂಕೆ ಮರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಅಂತ್ಯಸಂಸ್ಕಾರ ಮಾಡಿದರು   

ಕುಮಟಾ: ಸಮೀಪದ ಹೊನ್ನಾವರ ತಾಲ್ಲೂಕಿನ ಚಂದಾವರ ಅರಣ್ಯ ವ್ಯಾಪ್ತಿಯಲ್ಲಿ ಒಂದೂವರೆ ವರ್ಷದ ಗಂಡು ಜಿಂಕೆ ಮರಿಯೊಂದು ನಾಯಿಗಳ ದಾಳಿಯಿಂದ ಗುರುವಾರ ಮೃತಪಟ್ಟಿದೆ.

‘ಚಂದಾವರ ಹನುಮಂತ ದೇವಸ್ಥಾನ ಎದುರಿನ ಕಾಡಿನಲ್ಲಿ ನಾಯಿಗಳ ಹಿಂಡು ದಾಳಿ ನಡೆಸಿತು. ಇದರಿಂದಬೆದರಿದ ಜಿಂಕೆ ಮರಿ ಹೃದಯಾಘಾತವಾಗಿ ಮೃತಪಟ್ಟಿರುವ ಸಾಧ್ಯತೆ ಇದೆ. ನಂತರ ಜಿಂಕೆ ಮರಿಯ ಅಂತ್ಯ ಸಂಸ್ಕಾರ ನಡೆಸಲಾಯಿತು. ಫಾರೆಸ್ಟರ್ ಎಸ್.ಐ.ನಾಯ್ಕ ಇದ್ದರು’ ಎಂದು ಕುಮಟಾ ಆರ್.ಎಫ್.ಒ ಪ್ರವೀಣ ನಾಯಕ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT