ಶಿರಸಿ: 4 ಶತಮಾನಗಳಷ್ಟು ಹಳೆಯದಾಗಿದ್ದ ತಾಲ್ಲೂಕಿನ ಬನವಾಸಿಯ ಮಧುಕೇಶ್ವರ ದೇವಸ್ಥಾನದ ಮಹಾಸ್ಯಂದನ ರಥದ ಮರುನಿರ್ಮಾಣಕ್ಕೆ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಾಜಶೇಖರ ಒಡೆಯರ್, ಅವರ ಪುತ್ರ ವಿಶ್ವನಾಥ ರಾಜಶೇಖರ ಒಡೆಯರ್ ತಮ್ಮ ಕುಟುಂಬದ ವತಿಯಿಂದ ₹5,05,555 ದೇಣಿಗೆ ನೀಡಿದ್ದಾರೆ.
ಮಹಾಸ್ಯಂದನ ರಥ ನಿರ್ಮಾಣದ ಆರ್ಥಿಕ ಸಮಿತಿ ಅಧ್ಯಕ್ಷ ದ್ಯಾಮಣ್ಣ ದೊಡ್ಮನಿ ಅವರಿಗೆ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಚೆಕ್ ಹಸ್ತಾಂತರಿಸಿದರು.
‘ನೂತನ ರಥ ನಿರ್ಮಿಸಲು ಅಂದಾಜು ₹ 3 ಕೋಟಿ ಮೊತ್ತ ತಗಲುವ ಸಾಧ್ಯತೆ ಇದೆ. ರಥ ನಿರ್ಮಾಣ ಕಾರ್ಯ ಈಗಾಗಲೇ ಆರಂಭಗೊಂಡಿದ್ದು, ನಿರ್ಮಾಣ ವೆಚ್ಚಕ್ಕೆ ಭಕ್ತರಿಂದ ದೇಣಿಗೆ ಸಂಗ್ರಹಿಸಲಾಗುತ್ತಿದೆ. ರಾಜಶೇಖರ ಒಡೆಯರ್ ಕುಟುಂಬಸ್ಥರು ಒಂದು ದೊಡ್ಡ ಗಾಲಿ ನಿರ್ಮಾಣದ ಅಂದಾಜು ವೆಚ್ಚವನ್ನು ನೀಡಿದ್ದಾರೆ’ ಎಂದರು.
ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಕಾರ್ಯಾಧ್ಯಕ್ಷ ದಯಾನಂದ ಭಟ್, ಪ್ರಕಾಶ ಬಂಗಲೆ, ಶಿರಸಿ ಎ.ಪಿ.ಎಂ.ಸಿ. ಅದ್ಯಕ್ಷ ಶಿವಕುಮಾರ ದೇಸಾಯಿ ಗೌಡ, ಶ್ರೀನಿಧಿ ಮಂಗಳೂರು, ದತ್ತಾತ್ರೇಯ ಭಟ್, ವಿಶ್ವನಾಥ ಒಡೆಯರ, ಬನವಾಸಿ ಗ್ರಾಮ ಪಂಚಾಯ್ತಿ ಸದಸ್ಯ ಅಶೋಕ ಪೊನ್ನಪ್ಪ, ಸುಧೀರ ನಾಯರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.