ADVERTISEMENT

ಕಾರವಾರ ನಗರಸಭೆಯಿಂದ ‘ಇ–ಆಸ್ತಿ’ ಆಂದೋಲನ

ಹೊಸ ಕೆಎಚ್‌ಬಿ ಬಡಾವಣೆಯಲ್ಲಿ 18ರಂದು ಮೊದಲ ಹಂತದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 14 ಮೇ 2019, 12:45 IST
Last Updated 14 ಮೇ 2019, 12:45 IST

ಕಾರವಾರ:ಆಸ್ತಿ ಮಾಲೀಕರಿಗೆ ‘ಇ–ಆಸ್ತಿ’ (ಗಣಕೀಕೃತ ನಮೂನೆ 3) ನೀಡುವ ಸಲುವಾಗಿ ಪ್ರತಿ ತಿಂಗಳು ವಾರ್ಡ್‌ವಾರು ‘ಇ– ಆಸ್ತಿ ಆಂದೋಲನ’ ಹಮ್ಮಿಕೊಳ್ಳಲುನಗರಸಭೆತೀರ್ಮಾನಿಸಿದೆ. ಇದರ ಮೊದಲ ಕಾರ್ಯಕ್ರಮ ಮೇ 18ರಂದು ನಡೆಯಲಿದೆ.

ಹೊಸ ಕೆಎಚ್‌ಬಿ ಬಡಾವಣೆಯ ಪರಿಸರ ಭವನದಲ್ಲಿ ಅಂದು ಬೆಳಿಗ್ಗೆಬೆಳಿಗ್ಗೆ 10.30ರಿಂದ ಸಂಜೆ 5ರವರೆಗೆ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಇರುತ್ತಾರೆ. ಆಸ್ತಿ ಮಾಲೀಕರು ನಗರಸಭೆಗೆ ಪಾವತಿಸಬೇಕಾದ ಆಸ್ತಿ ತೆರಿಗೆ, ನೀರಿನ ಶುಲ್ಕ,ಪರವಾನಗಿ ಶುಲ್ಕ ಮುಂತಾದವುಗಳನ್ನು ಪಾವತಿಸಿ ಚಲನ್ ಪಡೆದುಕೊಳ್ಳಬಹುದು.

ಆಸ್ತಿ ಮಾಲೀಕರು ತಮ್ಮ ಭಾವಚಿತ್ರ, ಸ್ವತ್ತಿನ ಭಾವಚಿತ್ರ (ಕಟ್ಟಡ ಅಥವಾ ನಿವೇಶನ), ಗುರುತಿನ ದಾಖಲೆ, ಮಾಲೀಕತ್ವ ದೃಢೀಕರಿಸುವ ದಾಖಲೆ, ಕಟ್ಟಡ ಪರವಾನಗಿ ಪತ್ರ ಮತ್ತು ನಕ್ಷೆ, ಬಿನ್ ಶೇತ್ಕಿ ಆದೇಶ, ಲೇ ಔಟ್ ನಕ್ಷೆ, ಲೇ ಔಟ್ ಆದೇಶ ಪ್ರತಿ, ಪರಿತ್ಯಾಜನ ಪತ್ರ, ವಿದ್ಯುತ್ ಮೀಟರ್ ಸಂಖ್ಯೆ ಮತ್ತು ನೀರು ಸಂಪರ್ಕವಿದ್ದರೆ ಅದರ ಮೀಟರ್ ಸಂಖ್ಯೆ, ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ಪಾವತಿ ಚಲನ್ ಪ್ರತಿ ಸಲ್ಲಿಸಬೇಕು. ಬಳಿಕ ಸ್ಥಳದಲ್ಲೇ ಇ–ಆಸ್ತಿ ನಮೂನೆ 3 ನೀಡಲಾಗುವುದು ಎಂದು ನಗರಸಭೆ ಆಯುಕ್ತ ಯೋಗೇಶ್ವರ್ ತಿಳಿಸಿದ್ದಾರೆ.

ADVERTISEMENT

‘ಇ ಆಸ್ತಿ’ಯ ಬಳಕೆ:ನಗರಸಭೆ ವ್ಯಾಪ್ತಿಯಲ್ಲಿ ಎಲ್ಲ ಆಸ್ತಿಗಳ ಉತಾರ, ಆಸ್ತಿ ಹಕ್ಕು ಬದಲಾವಣೆ, ಹೊಸ ಆಸ್ತಿಗಳ ಸೇರ್ಪಡೆ ಮತ್ತು ತಿದ್ದುಪಡಿಗಳನ್ನು ‘ಇ–ಆಸ್ತಿ’ ತಂತ್ರಾಂಶದ ಮೂಲಕ ಮಾಡಲಾಗುತ್ತದೆ. ತೆರಿಗೆದಾರರಿಗೆ ಗಣಕೀಕೃತ ನಮೂನೆ 3ನ್ನು ನೀಡಲಾಗುತ್ತದೆ. ಈ ಹಿಂದಿನಂತೆ ಬರವಣಿಗೆಯ ಉತಾರಗಳನ್ನು ನೀಡುವುದನ್ನು ನಿಲ್ಲಿಸಲಾಗಿದೆ. ಆದ್ದರಿಂದ ಆಸ್ತಿ ಮಾಲೀಕರು ಅರ್ಜಿ ನಮೂನೆಯನ್ನು ಕಂದಾಯ ವಿಭಾಗದಲ್ಲಿ ಪಡೆದುಕೊಂಡು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಕೊಡಬೇಕು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.