ಕುಮಟಾ: ‘ಶತಮಾನೋತ್ಸವ ನೆನಪಿನಲ್ಲಿ ಹಳಕಾರ ವಿಲೇಜ್ ಫಾರೆಸ್ಟ್ ತನ್ನ ಆದಾಯ ಹೆಚ್ಚಿಸಿಕೊಳ್ಳಲು ‘ಇಕೋ ಹಾರ್ಟಿ ಟೂರಿಸಂ’ ಯೋಜನೆಯನ್ನು ಅಳವಡಿಸಿಕೊಳ್ಳುವುದು ಸೂಕ್ತ’ ಎಂದು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ನಿವೃತ್ತ ಡೀನ್ ನಾಗೇಶ ನಾಯ್ಕ ಹೇಳಿದರು.
ಸೋಮವಾರ ನಡೆದ ವಿಲೇಜ್ ಫಾರೆಸ್ಟ್ ಶತಮಾನೋತ್ಸವ ಸಮಾರಂಭದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವರ್ಷವಿಡೀ ಫಲ ನೀಡುವ ಗಿಡ್ಡ ತಳಿಯ ಹಲಸು, ಅಪ್ಪೆ ಮಿಡಿ ಬೆಳೆಯುವ ಮೂಲಕ ವಿಲೇಜ್ ಫಾರೆಸ್ಟ್ ತನ್ನ ಆದಾಯ ಹೆಚ್ಚಿಸಿಕೊಳ್ಳಬಹುದು’ ಎಂದರು.
‘ಅರಣ್ಯ ರಕ್ಷಣೆಗೆ ಹಳಕಾರ ವಿಲೇಜ್ ಫಾರೆಸ್ಟ್ ನಾಯಕತ್ವ ನೀಡಿದೆ’ ಎಂದು ಹೊನ್ನಾವರ ಡಿಸಿಎಫ್ ಯೊಗೀಶ್ ಸಿ.ಕೆ. ಹೇಳಿದರು.
ಪ್ರಭಾರ ತಹಶೀಲ್ದಾರ್ ಸತೀಶ ಗೌಡ, ‘ಕುಮಟಾ ಪಟ್ಟಣದ ಹವಾಮಾನದ ಮೇಲೆ ಪರಿಣಾಮ ಬೀರಬಲ್ಲ ಹಳಕಾರ ವಿಲೇಜ್ ಫಾರೆಸ್ಟ್‌ಗೆ 13 ವರ್ಷಗಳ ನಂತರ ಹೊಸ ಆಡಳಿತ ಸಮಿತಿ ರಚಿಸುವ ಅವಕಾಶ ದೊರೆಯಿತು’ ಎಂದರು.
ನಿವೃತ್ತ ಎಸ್ಪಿ ಎನ್.ಟಿ.ಪ್ರಮೋದ ರಾವ್, ಕೆವಿಜಿ ಬ್ಯಾಂಕ್ ಎ.ಜಿ.ಎಂ ಉಲ್ಲಾಸ ಗುನಗಾ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ, ಸಾಮಾಜಿಕ ಕಾರ್ಯಕರ್ತ ವಸಂತ ಮಾಧವ, ಎಸಿಎಫ್ ಕೃಷ್ಣ ಗೌಡ, ಶಂಕರ ಪಟಗಾರ, ಶ್ರೀಕಾಂತ ಗುನಗಾ, ವಿನಾಯಕ ಪಟಗಾರ, ಜಗ್ಗು ನಾಯ್ಕ ಬಾಡ, ಸೀತಾರಾಮ ಗುನಗಾ, ಗಜಾನನ ಗುನಗಾ, ಅಧ್ಯಕ್ಷ ನಾಗರಾಜ ಭಟ್ಟ, ಕಾರ್ಯದರ್ಶಿ ಶಾಂತಾರಾಮ ಹರಿಕಂತ್ರ ಇದ್ದರು. ರವೀಂದ್ರ ಭಟ್ಟ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.