ADVERTISEMENT

ಕಾರವಾರ: ವಿದ್ಯುತ್ ಶಾಕ್ ತಗುಲಿ ಕಾಡಾನೆ ಸಾವು

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 9:50 IST
Last Updated 18 ಜೂನ್ 2025, 9:50 IST
   

ಕಾರವಾರ: ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಕುಳಗಿ ವನ್ಯಜೀವಿ ವಲಯ ವ್ಯಾಪ್ತಿಯ ಜಮಗಾ ಅರಣ್ಯ ಪ್ರದೇಶದಲ್ಲಿ ವಿದ್ಯುತ್ ಶಾಕ್ ತಗುಲಿ ಹೆಣ್ಣು ಕಾಡಾನೆಯೊಂದು ಮೃತಪಟ್ಟಿದೆ.

ಕಾಡಿನಲ್ಲಿ ಮಂಗಳವಾರ ಸಂಜೆ ಅರಣ್ಯ ಸಿಬ್ಬಂದಿ ಗಸ್ತು ತಿರುಗುವ ವೇಳೆ ಮೃತ ಸ್ಥಿತಿಯಲ್ಲಿ ಆನೆ ಪತ್ತೆಯಾಗಿತ್ತು.

'ಆಹಾರ ಅರಸುತ್ತಿದ್ದ ಆನೆಯು ಸಾಗವಾನಿ ಮರವೊಂದನ್ನು ಬಲವಾಗಿ ನೂಕಿರಬಹುದು. ಮರದ ಕೊಂಬೆಯು 220 ಕೆ.ವಿ ವಿದ್ಯುತ್ ತಂತಿಗೆ ಬಡಿದು ಅದರಿಂದ ಶಾಕ್ ತಗುಲಿ ಆನೆ ಮೃತಪಟ್ಟಿರಬಹುದು' ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.

ADVERTISEMENT

ಘಟನೆ ನಡೆದ ಸ್ಥಳಕ್ಕೆ ಬುಧವಾರ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ತಲುಪಿದೆ. ದಾಂಡೇಲಿ ಪಶು ಆಸ್ಪತ್ರೆ ವೈದ್ಯಾಧಿಕಾರಿ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.