ADVERTISEMENT

ಕುಮಟಾ: ಬಾಂಬ್ ಹೋಲುವ ವಸ್ತು ಪತ್ತೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 16:19 IST
Last Updated 27 ಅಕ್ಟೋಬರ್ 2021, 16:19 IST
ಕುಮಟಾದ ಮೈನರ್ ಫಾರೆಸ್ಟ್‌ ಪ್ರದೇಶದಲ್ಲಿ ಬುಧವಾರ ಸಂಜೆ ಬಾಂಬ್ ಹೋಲುವ ವಸ್ತು ಪತ್ತೆಯಾಗಿದ್ದು, ಸ್ಥಳಕ್ಕೆ ಪೊಲೀಸ್ ಪಹರೆ ಒದಗಿಸಲಾಗಿದೆ
ಕುಮಟಾದ ಮೈನರ್ ಫಾರೆಸ್ಟ್‌ ಪ್ರದೇಶದಲ್ಲಿ ಬುಧವಾರ ಸಂಜೆ ಬಾಂಬ್ ಹೋಲುವ ವಸ್ತು ಪತ್ತೆಯಾಗಿದ್ದು, ಸ್ಥಳಕ್ಕೆ ಪೊಲೀಸ್ ಪಹರೆ ಒದಗಿಸಲಾಗಿದೆ   

ಕುಮಟಾ: ಪಟ್ಟಣದ ಕೊಂಕಣ ರೈಲ್ವೆ ನಿಲ್ದಾಣದ ಸಮೀಪದ ಮೈನರ್ ಫಾರೆಸ್ಟ್‌ ಪ್ರದೇಶದಲ್ಲಿ ಬಾಂಬ್ ಹೋಲುವ ವಸ್ತುವೊಂದು ಬುಧವಾರ ಸಂಜೆ ಪತ್ತೆಯಾಗಿದೆ. ಇದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

‘ಸಿಕ್ಕಿರುವುದು ನಕಲಿ ಬಾಂಬ್ ಆಗಿರುವ ಸಾಧ್ಯತೆಯಿದೆ. ಈ ಬಗ್ಗೆ ಪರಿಶೀಲಿಸಲಾಗುತ್ತಿದೆ’ ಎಂದು ಪಿ.ಎಸ್.ಐ ಆನಂದಮೂರ್ತಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿ ನೀಡಿದ ಸಮೀಪದ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ರತನ್ ಗಾಂವ್ಕರ್, ‘ನಮ್ಮ ಸಂಸ್ಥೆಯ ಆವರಣದ ಬಳಿ ಒಂದು ಚಿಕ್ಕ ಸಿಲಿಂಡರ್, ಬ್ಯಾಟರಿ ಒಳಗೊಂಡ ವಸ್ತು ಬಿದ್ದಿರುವುದನ್ನು ನೋಡಿದ್ದೇವೆ’ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಮುಂದುವರಿದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.