ADVERTISEMENT

ಕಾರವಾರ: 15 ಶಿಕ್ಷಕರಿಗೆ ಪ್ರಶಸ್ತಿಯ ಗೌರವ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 15:47 IST
Last Updated 3 ಸೆಪ್ಟೆಂಬರ್ 2021, 15:47 IST

ಕಾರವಾರ: ಶೈಕ್ಷಣಿಕ ಜಿಲ್ಲೆಯಲ್ಲಿ 2021– 22ನೇ ಸಾಲಿಗೆ ‘ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’ಯನ್ನು ಶಿಕ್ಷಣ ಇಲಾಖೆಯು ಶುಕ್ರವಾರ ಪ್ರಕಟಿಸಿದೆ. ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ ವಿಭಾಗಗಳಿಂದ ಪ್ರತಿ ತಾಲ್ಲೂಕಿಗೆ ಒಬ್ಬರಂತೆ ಒಟ್ಟು 15 ಶಿಕ್ಷಕರು ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಪ್ರಶಸ್ತಿಯು ತಲಾ ₹ 5 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ ಎಂದು ಇಲಾಖೆಯ ಉಪ ನಿರ್ದೇಶಕ ಹರೀಶ ಗಾಂವ್ಕರ್ ತಿಳಿಸಿದ್ದಾರೆ.

ತಾಲ್ಲೂಕುವಾರು ಪ್ರಶಸ್ತಿ ಪುರಸ್ಕೃತರು (ಕಿರಿಯ ಪ್ರಾಥಮಿಕ): ಕಾರವಾರ ತಾಲ್ಲೂಕಿನ ಇಡೂರ ಶಾಲೆಯ ವನಿತಾ ಎಸ್.ನಾಯ್ಕ, ಅಂಕೋಲಾ ತಾಲ್ಲೂಕಿನ ಆಗೇರಕೇರಿ ಶಾಲೆಯ ಭಾರತಿ ಗಣಪತಿ ನಾಯಕ, ಕುಮಟಾ ತಾಲ್ಲೂಕಿನ ಉಳ್ಳೂರುಮಠ ಶಾಲೆಯ ಶ್ರೀಕಾಂತ ಮಂಜುನಾಥ ಆಚಾರಿ, ಹೊನ್ನಾವರ ತಾಲ್ಲೂಕಿನ ಕೊಡ್ಲ ಶಾಲೆಯ ಸತ್ಯ
ನಾರಾಯಣ ಲಕ್ಷ್ಮಿನಾರಾಯಣ ಹೆಗಡೆ ಹಾಗೂ ಭಟ್ಕಳ ತಾಲ್ಲೂಕಿನ ಮೂಡ ಭಟ್ಕಳ ಶಾಲೆಯ ಗೀತಾ ಶಿರೂರು.

ADVERTISEMENT

ಹಿರಿಯ ಪ್ರಾಥಮಿಕ ಶಾಲೆ: ಕಾರವಾರ ತಾಲ್ಲೂಕಿನ ಚೆಂಡಿಯಾ ನಂ 1 ಶಾಲೆಯ ಜ್ಯೋತಿ ಬಾಬನಿ ಗುನಗಿ, ಅಂಕೋಲಾ ತಾಲ್ಲೂಕಿನ ತೆಂಕಣಕೇರಿ ಶಾಲೆಯ ಯಾಸ್ಮೀನ್ ಬಾನು ಎ.ಶೇಖ್, ಕುಮಟಾ ತಾಲ್ಲೂಕಿನ ಗುಡೆ ಅಂಗಡಿ ಶಾಲೆಯ ವಸಂತ ವಾಸುದೇವ ಶಾನಭಾಗ, ಹೊನ್ನಾವರ ತಾಲ್ಲೂಕಿನ ಹಿರೇಮಠ ಉರ್ದು ಶಾಲೆಯ ಬೀಬಿ ಫರೀದಾ ಎ.ಶೇಖ್ ಹಾಗೂ ಭಟ್ಕಳ ತಾಲ್ಲೂಕಿನ ಕುಕನೀರ ಶಾಲೆಯ ರೇಖಾ ವಿ.ಪಟಗಾರ.

ಪ್ರೌಢಶಾಲೆ ವಿಭಾಗ: ಕಾರವಾರ ತಾಲ್ಲೂಕಿನ ತೋಡೂರು ಶಾಲೆಯ ಉಮೇಶ ಕೆ.ನಾಯಕ, ಅಂಕೋಲಾ ತಾಲ್ಲೂಕಿನ ಬೇಲೆಕೇರಿ ಶಾಲೆಯ ಪ್ರಶಾಂತ ದಿನಕರ ನಾಯ್ಕ, ಕುಮಟಾ ತಾಲ್ಲೂಕಿನ ಗಿಬ್ ಶಾಲೆಯ ಡಿ.ಜಿ.ಶಾಸ್ತ್ರಿ, ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪ ಶಾಲೆಯ ಬಾಬು ಲಚ್ಚಯ್ಯ ನಾಯ್ಕ ಮತ್ತು ಭಟ್ಕಳ ತಾಲ್ಲೂಕಿನ ಮುಂಡಳ್ಳಿ ಶಾಲೆಯ ಚೆನ್ನವೀರಪ್ಪ ಆರ್.ಹೊಸಮನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.