
ಕುಮಟಾ: ತಾಲ್ಲೂಕಿನ ಧಾರೇಶ್ವರದ ರಾಮನಗಿಂಡಿ ಕಡಲತೀರದಲ್ಲಿ ವರ್ಷಗಳಿಂದ ಅಳವಡಿಸಿದ್ದ ಸಿನೆಮಾದ ಸೆಟ್‌ನ್ನು ತೆರವುಗೊಳಿಸುವ ಪ್ರಕ್ರಿಯೆ ನಡೆದಿದೆ. ಸೆಟ್‌ಗೆ ಬಳಸಿದ್ದ ಪರಿಕರಗಳು ಸಮುದ್ರಕ್ಕೆ ಸೇರುತ್ತಿರುವ ಮತ್ತು ಮೀನುಗಾರರಿಗೆ ಕೆಲಸಕ್ಕೆ ಅಡ್ಡಿಯಾಗುತ್ತಿದೆ ಎಂಬ ದೂರುಗಳಿದ್ದವು.
‘ತಗಡಿನ ಶೀಟು, ಫ್ಲೈವುಡ್ ನಂತಹ ಹಗುರ ವಸ್ತುಗಳಿಂದ ಕೂಡಿದ್ದ ಚಿತ್ರೀಕರಣದ ಸೆಟ್‌ನ ಹೆಚ್ಚಿನ ಸಾಮಗ್ರಿಗಳು ಮಳೆಯ ರಭಸಕ್ಕೆ ಕಿತ್ತು ಬಿದ್ದು ಸಮುದ್ರ ದಡದಲ್ಲಿ ಸಂಗ್ರಹವಾಗಿತ್ತು. ಮೀನುಗಾರಿಕೆಗೆ ಸಮಸ್ಯೆಯಾಗುತ್ತಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಚಿತ್ರೀಕರಣದ ಸೆಟ್ ತೆರವುಗೊಳಿಸಲು ಸೂಚಿಸಲಾಗಿತ್ತು’ ಎಂದು ಧಾರೇಶ್ವರ ಗ್ರಾಮ ಪಂಚಾಯಿತಿ ಅಂದಿನ ಪಿ.ಡಿ.ಒ ವಿನಯಕುಮಾರ ನಾಯ್ಕ ತಿಳಿಸಿದರು.
‘ಚಿತ್ರೀಕರಣದ ಬಳಿಕ ಅಲ್ಲಿಯ ವಸ್ತುಗಳನ್ನು ಸ್ಥಳೀಯ ವ್ಯಾಪಾರಿಯೊಬ್ಬರಿಗೆ ಮಾರಲಾಗಿದ್ದು, ಅವುಗಳನ್ನು ಕಳಚಿ ತೆರವುಗೊಳಿಸುವ ಕಾರ್ಯ ಆರಂಭವಾಗಿದೆ’ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಸ್.ಟಿ. ನಾಯ್ಕ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.