ADVERTISEMENT

ಇನ್ಸುಲೇಟರ್‌ಗೆ ಬೆಂಕಿ: ತಪ್ಪಿದ ಅಪಾಯ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 13:46 IST
Last Updated 11 ಫೆಬ್ರುವರಿ 2020, 13:46 IST
ದಾಂಡೇಲಿ ತಾಲ್ಲೂಕಿನ ಅಂಬಿಕಾನಗರದಲ್ಲಿರುವ ಕೆ.ಪಿ.ಟಿ.ಸಿ.ಎಲ್ ಪವರ್ ಹೌಸ್ ಬಳಿಯ ವಿದ್ಯುತ್ ಗ್ರಿಡ್‍ನ ಇನ್ಸುಲೇಟರ್‌ನಲ್ಲಿ ಸೋಮವಾರ ಕಾಣಿಸಿಕೊಂಡ ಬೆಂಕಿಯ ಸಿ.ಸಿ.ಸಿ.ಟಿ.ವಿ ದೃಶ್ಯ
ದಾಂಡೇಲಿ ತಾಲ್ಲೂಕಿನ ಅಂಬಿಕಾನಗರದಲ್ಲಿರುವ ಕೆ.ಪಿ.ಟಿ.ಸಿ.ಎಲ್ ಪವರ್ ಹೌಸ್ ಬಳಿಯ ವಿದ್ಯುತ್ ಗ್ರಿಡ್‍ನ ಇನ್ಸುಲೇಟರ್‌ನಲ್ಲಿ ಸೋಮವಾರ ಕಾಣಿಸಿಕೊಂಡ ಬೆಂಕಿಯ ಸಿ.ಸಿ.ಸಿ.ಟಿ.ವಿ ದೃಶ್ಯ   

ದಾಂಡೇಲಿ:ಕರ್ನಾಟಕ ವಿದ್ಯುತ್ ನಿಗಮದ ಅಂಬಿಕಾನಗರದ ಪವರ್ ಹೌಸ್ ಬಳಿಯ ವಿದ್ಯುತ್ ಗ್ರಿಡ್‍ನ ಇನ್ಸುಲೇಟರ್‌ನಲ್ಲಿ ಸೋಮವಾರ ಭಾರಿ ಸ್ಫೋಟದೊಂದಿಗೆ ಅಗ್ನಿ ಅವಘಡ ಸಂಭವಿಸಿತು. ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿತು.

ನಿಗಮದ ಪವರ್ ಹೌಸ್‍ಗೆಸಮೀಪದಲ್ಲಿರುವವಿದ್ಯುತ್ ಗ್ರಿಡ್‌ನಲ್ಲಿ ಈ ಅವಘಡವಾಗಿದ್ದು, ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ಸುಲೇಟರ್‌ನಲ್ಲಿ ಇದ್ದಕ್ಕಿದ್ದಂತೆ ಸ್ಫೋಟಗೊಂಡ ರೀತಿಯಲ್ಲಿ ಶಬ್ದವಾಗಿ ಬೆಂಕಿ ಹೊತ್ತಿಕೊಂಡಿತು.ಇದರಿಂದಹತ್ತಿರದಲ್ಲಿದ್ದ ನಿಗಮದ ಸಿಬ್ಬಂದಿ ಭಯಭೀತರಾದರು. ಸ್ವಲ್ಪ ಹೊತ್ತಿನ ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ಘಟನೆಯಿಂದ ವಿದ್ಯುತ್ ನಿಗಮಕ್ಕೆಲಕ್ಷಾಂತರ ರೂಪಾಯಿಹಾನಿಯಾಗಿರಬಹುದೆಂದು ಅಂದಾಜಿಸಲಾಗಿದೆ. ಆದರೆ, ಈ ಬಗ್ಗೆ ಮಾಹಿತಿ ಪಡೆಯಲು ನಿಗಮದ ಅಧಿಕಾರಿಗಳು ಲಭ್ಯರಾಗಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.