ADVERTISEMENT

ಬಲೆಗೆ ಬಿದ್ದ ‘ತಿಮಿಂಗಿಲ ಸೊರಾ’ ಮೀನು

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 15:30 IST
Last Updated 22 ಜನವರಿ 2021, 15:30 IST
ಹೊನ್ನಾವರ ತಾಲ್ಲೂಕಿನ ತದಡಿಯಿಂದ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ಬಲೆಗೆ ಬಿದ್ದ ತಿಮಿಂಗಿಲ ಸೊರಾ’ ಮೀನು
ಹೊನ್ನಾವರ ತಾಲ್ಲೂಕಿನ ತದಡಿಯಿಂದ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ಬಲೆಗೆ ಬಿದ್ದ ತಿಮಿಂಗಿಲ ಸೊರಾ’ ಮೀನು   

ಕಾರವಾರ: ಕುಮಟಾ ತಾಲ್ಲೂಕಿನ ತದಡಿ ಬಂದರಿನಿಂದ ಶುಕ್ರವಾರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ಅಚ್ಚರಿ ಕಾದಿತ್ತು. ಬೃಹತ್ ಗಾತ್ರದ ‘ತಿಮಿಂಗಲ ಸೊರಾ’ (ವೇಲ್ ಶಾರ್ಕ್) ಮೀನೊಂದು ಬಲೆಗೆ ಬಿದ್ದಿತ್ತು.

ಗುಜರಾತ್‌ ಕರಾವಳಿಯಿಂದ ಕೇರಳದವರೆಗೂ ಕಾಣಸಿಗುವ ಈ ಮೀನುಗಳು ಬಲೆಗೆ ಬೀಳುವುದು ಅಪರೂಪ. ನೀರು ಸುಮಾರು 21 ಡಿಗ್ರಿ ಸೆಲ್ಷಿಯಸ್‌ಗಿಂದ ಕಡಿಮೆ ಉಷ್ಣಾಂಶವಿರುವ ಆಳ ಸಮುದ್ರದಲ್ಲಿ ಇವು ವಾಸಿಸುತ್ತವೆ. ಅಂದಾಜು 800 ಕೆ.ಜಿ.ಯಷ್ಟು ತೂಕವಿರುವ ಇವುಗಳನ್ನು, ಮತ್ಸ್ಯ ಸಂಕುಲದ ಅತಿದೊಡ್ಡ ಸದಸ್ಯರಲ್ಲಿ ಒಂದು ಎಂದು ಗುರುತಿಸಲಾಗಿದೆ.

ಅರಬ್ಬಿ ಸಮುದ್ರದಲ್ಲಿ ಹೆಚ್ಚಾಗಿ ಕಾಣಸಿಗುತ್ತಿದ್ದ ಈ ಪ್ರಭೇದದ ಮೀನುಗಳು, ಕೆಲವು ವರ್ಷಗಳಿಂದ ಅಪರೂಪವಾಗಿವೆ. ಹಾಗಾಗಿ ಅವುಗಳನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಗುರುತಿಸಲಾಗಿದ್ದು, ಬೇಟೆಯಾಡುವುದು ಅಪರಾಧವಾಗಿವೆ.

ADVERTISEMENT

ಅಚಾನಕ್ ಆಗಿ ಬಲೆಗೆ ಬಿದ್ದರೂ ಅವುಗಳನ್ನು ಪುನಃ ನೀರಿಗೆ ಬಿಡಲಾಗುತ್ತದೆ. ತದಡಿಯ ಮೀನುಗಾರರೂ ತಮ್ಮ ಬಲೆಗೆ ಬಿದ್ದ ಮೀನನ್ನು ದೋಣಿಗೆ ಎಳೆದು ಬಲೆಯಿಂದ ಬಿಡಿಸಿ ಪುನಃ ನೀರಿಗೆ ಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.