
ಪ್ರಜಾವಾಣಿ ವಾರ್ತೆ
ಗೋಕರ್ಣ (ಉತ್ತರ ಕನ್ನಡ): ಇಲ್ಲಿನ ಸಮುದ್ರದಲ್ಲಿ ಭಾನುವಾರ ಈಜಲು ತೆರಳಿದ್ದ ಝೆಕ್ ದೇಶದ ಮಿಲೋಸ್ಲಾವ್ ಹೋರಾಕೋವಾ (78) ಎಂಬ ಮಹಿಳೆ ಅಲೆಗಳ ಅಬ್ಬರಕ್ಕೆ ಸಿಲುಕಿ, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
‘ವಾರದ ಹಿಂದೆ ಗೋಕರ್ಣಕ್ಕೆ ಬಂದಿದ್ದ ಮಿಲೋಸ್ಲಾವ್ ಅವರು ಮೇನ್ ಬೀಚ್‌ನಲ್ಲಿ ಇರುವ ಅತಿಥಿಗೃಹದಲ್ಲಿ ಉಳಿದಿದ್ದರು. ಝೆಕ್ ರಾಯಭಾರಿ ಕಚೇರಿಗೆ ವಿಷಯ ತಿಳಿಸಲಾಗಿದೆ. ಅವರ ಸೂಚನೆಯಂತೆ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.