ADVERTISEMENT

ಕಳಚೆ: ಸೌರ ದೀಪಗಳ ವಿತರಣೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 15:16 IST
Last Updated 11 ಆಗಸ್ಟ್ 2021, 15:16 IST
ಯಲ್ಲಾಪುರ ತಾಲ್ಲೂಕಿನ ಕಳಚೆ ಭೂ ಕುಸಿತ ಪ್ರದೇಶಕ್ಕೆ ಸಿ.ಸಿ.ಎಫ್ ಡಿ.ಯತೀಶ್ ಕುಮಾರ್ ಈಚೆಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು.
ಯಲ್ಲಾಪುರ ತಾಲ್ಲೂಕಿನ ಕಳಚೆ ಭೂ ಕುಸಿತ ಪ್ರದೇಶಕ್ಕೆ ಸಿ.ಸಿ.ಎಫ್ ಡಿ.ಯತೀಶ್ ಕುಮಾರ್ ಈಚೆಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು.   

ಯಲ್ಲಾಪುರ: ತಾಲ್ಲೂಕಿನ ಕಳಚೆಯ ಭೂ ಕುಸಿತ ಪ್ರದೇಶಗಳಿಗೆ ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ.ಯತೀಶ್ ಕುಮಾರ್ ಈಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅರಣ್ಯ ಇಲಾಖೆಯಿಂದ ಸುಮಾರು 150 ಮನೆಗಳಿಗೆ ಸೌರ ವಿದ್ಯುತ್ ದೀಪಗಳನ್ನು ವಿತರಿಸಿದರು.

ಗ್ರಾಮಸ್ಥರೊಂದಿಗೆ ಸಭೆ ನಡೆಸಿದ ಅವರು ಅವರ ಅಹವಾಲುಗಳನ್ನು ಆಲಿಸಿದರು. ಪ್ರತಿ ಮನೆಗೆ ಸುಮಾರು ₹ 8,500 ಮೌಲ್ಯದಲ್ಲಿ ಮೂರು ಲೈಟ್ ಹಾಗೂ ಒಂದು ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಅಳವಡಿಸಿ ಕೊಡಲಾಗುತ್ತಿದೆ. ಅಲ್ಲದೆ, ಎರಡು ಕೇರಿಗೆ ನೀರಿನ ಟ್ಯಾಂಕ್ ಹಾಗೂ ಪೈಪ್ ಲೈನ್ ಅಳವಡಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಇವುಗಳಿಗೆ ಸುಮಾರು ₹ 20 ಲಕ್ಷ ವೆಚ್ಚವಾಗಲಿದೆ.

ಈ ಸಂದರ್ಭದಲ್ಲಿ ಎ.ಸಿ.ಎಫ್‌.ಗಳಾದ ಹಿಮವತಿ ಭಟ್ಟ, ಅಶೋಕ ಭಟ್ಟ, ಆರ್.ಎಫ್.ಒ.ಗಳಾದ ಪ್ರಸಾದ ಪೆಡ್ನೇಕರ್, ಬಾಲಸುಬ್ರಹ್ಮಣ್ಯ, ಮಹೇಶ್ ಗೌಡ, ಸ್ಥಳೀಯ ಪ್ರಮುಖರಾದ ಉಮೇಶ ಭಾಗ್ವತ್, ಗಜಾನನ ಭಟ್ಟ, ವೆಂಕಟ್ರಮಣ ಬೆಳ್ಳಿ, ರಾಮನಾಥ ಹೆಗಡೆ, ಹಾಗೂ ಯಲ್ಲಾಪುರ ವಿಭಾಗದ ಎಲ್ಲ ಎ.ಸಿ.ಎಫ್.ಗಳು, ಆರ್.ಎಫ್.ಒ.ಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.