ಅಂಕೋಲಾ: ‘ಸಾಧನೆಗಿಂತ ಸಾಧಕರು ಬದುಕಿದ ರೀತಿಯೇ ದೊಡ್ಡ ಸಾಧನೆ’ ಎಂದು ಗಾಂಧೀವಾದಿ, ಮೂಡುಬಿದಿರೆಯ ಅರವಿಂದ ಚೊಕ್ಕಾಡಿ ಹೇಳಿದರು.
ಡಾ.ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ವತಿಯಿಂದ ಪಟ್ಟಣದ ಪಿ.ಎಂ.ಕಾಲೇಜಿನ ಗಂಗಾದೇವಿ ತೊರ್ಕೆ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಶಂಕರ ಕೇಣಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಮಹಾತ್ಮ ಗಾಂಧಿ ಹಾಗೂ ಆಧುನಿಕ ಭಾರತ’ ಕುರಿತು ಅವರು ಮಾತನಾಡಿದರು.
‘ಸಣ್ಣ ಸಣ್ಣ ವೃತ್ತಿಯಲ್ಲಿ ಮಾದರಿ ಬದುಕನ್ನು ನಡೆಸಿದವರು, ಸಾಧನೆಗಳ ಹಿಂದಿನ ಬದುಕು ಅನುಕರಣೀಯವಾಗಿದ್ದರೆ ಅಂತಹ ಸಾಧಕರು ನಿಜವಾಗಿ ಸನ್ಮಾನಕ್ಕೆ ಅರ್ಹರು. ಇಂತಹ ಬದುಕಿಗೆ ಸಾಕ್ಷಿಯಾದವರು ಮಹಾತ್ಮ ಗಾಂಧಿ’ ಎಂದರು.
ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷ ಮೋಹನ ಹಬ್ಬು ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಅಪ್ಪಟ ಸಮಾಜವಾದಿ ದಿ.ಶಂಕರ ಕೇಣಿಯವರ ಆದರ್ಶ ಜನಮಾನಸದಲ್ಲಿ ಅಮರವಾಗಿದೆ’ ಎಂದರು.
ಪ್ರತಿಷ್ಠಾನದ ಮಹಾಪೋಷಕ ಕೇಶವ ಪೆಡ್ನೇಕರ ಮಾತನಾಡಿದರು. ದಿನಕರ ಸ್ಮಾರಕ ಪ್ರತಿಷ್ಠಾನದ ಉಪಾಧ್ಯಕ್ಷರ ಆರ್.ಜಿ. ಗುಂದಿ, ಲಲಿತಾ ನಾಯ್ಕ, ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ, ಸಹಕಾರ್ಯದರ್ಶಿ ಜಗದೀಶ ನಾಯಕ, ಮಹಾಂತೇಶ ರೇವಡಿ, ಜಿ.ಆರ್. ನಾಯಕ, ದಿನಕರ ವೇದಿಕೆಯ ಅಧ್ಯಕ್ಷ ರವೀಂದ್ರ ಕೇಣಿ, ಸಾಹಿತಿ ವಿಠ್ಠಲ ಗಾಂವಕರ, ಅಂಕೋಲಾ ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಶೆಟ್ಟಿ, ಪ್ರಾಚಾರ್ಯ ಫಾಲ್ಗುಣ ಗೌಡ, ಉಪನ್ಯಾಸಕಿ ಪುಷ್ಪಾ ನಾಯ್ಕ, ಎಂ.ಎಂ. ಕರ್ಕಿಕರ, ಜಯಶೀಲ ಆಗೇರ, ಜೆ. ಪ್ರೇಮಾನಂದ, ಶ್ರೀಧರ ನಾಯಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.