ADVERTISEMENT

ಗೋಕರ್ಣ: ಅಕಾಲಿಕ ಮಳೆಗೆ ಮುಗುಚಿದ ಭತ್ತದ ಸಸಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 2:41 IST
Last Updated 27 ಅಕ್ಟೋಬರ್ 2025, 2:41 IST
ಗೋಕರ್ಣದ ಬೇಲೆಹಿತ್ತಲ ಬಳಿ ಮಳೆಯಿಂದ ಭತ್ತದ ಸಸಿ ಮುಗುಚಿ ಬಿದ್ದಿದೆ
ಗೋಕರ್ಣದ ಬೇಲೆಹಿತ್ತಲ ಬಳಿ ಮಳೆಯಿಂದ ಭತ್ತದ ಸಸಿ ಮುಗುಚಿ ಬಿದ್ದಿದೆ   

ಗೋಕರ್ಣ: ಕರಾವಳಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾದ ಅಕಾಲಿ ಗಾಳಿ ಮಳೆಗೆ ಗೋಕರ್ಣ ಹೋಬಳಿಯ ಅನೇಕ ಕಡೆ ಭತ್ತದ ಸಸಿ ಗದ್ದೆಯಲ್ಲಿಯೇ ಮುಗುಚಿ ಬಿದ್ದು, ಅಪಾರ ಬೆಳೆ ನಷ್ಟವಾಗಿದೆ.

ಭತ್ತದ ಪೈರು ಕಟಾವಿಗೆ ಬಂದಿದ್ದು, ಅನಿಯಮಿತ ಮಳೆಯ ಕಾರಣ ಕೆಲವು ಕಡೆ ಕಟಾವು ಮಾಡದೇ ಬಿಟ್ಟಿದ್ದರು. ಆದರೆ ಕಳೆದೆರೆಡು ದಿನದಿಂದ ಸುರಿದ ರಭಸದ ಗಾಳಿ ಮಳೆಗೆ ಬೆಳೆದು ನಿಂತ ಭತ್ತದ ಸಸಿ ಸಂಪೂರ್ಣ ಮುಚಿಬಿದ್ದಿದೆ. ದಂಡೆಭಾಗ, ಬೇಲೆಗದ್ದೆ, ಸಣ್ಣಬಿಜ್ಜೂರಿನ ಹಲವು ಗದ್ದೆಗಳಲ್ಲಿ ಮಳೆಯಿಂದ ಈ ಪರಿಸ್ಥಿತಿ ಉಂಟಾಗಿದೆ.

‘ಒಂದೆರೆಡು ದಿನಗಳಲ್ಲಿ ಕಟಾವು ಮಾಡಲಿದ್ದೇವು. ಆದರೆ ಮಳೆ ಎಲ್ಲವನ್ನೂ ಕೊಚ್ಚಿಕೊಂಡು ಹೋಯಿತು. ಮಳೆಯ ರಭಸಕ್ಕೆ ಬೆಳೆದು ನಿಂತ ಭತ್ತದ ಸಸಿ ಅಲ್ಲಿಯೇ ಮುಗುಚಿ ಬಿದ್ದು ಕೆಲವು ಕಡೆ ಮತ್ತೆ ಮೊಳಕೆಯೊಡೆಯುತ್ತಿದೆ. ಭತ್ತವೆಲ್ಲಾ ನೀರಲ್ಲಿ ಉರುಳಿಬಿದ್ದು ನಷ್ಟವಾಗಿದೆ’ ಎಂದು ರೈತ, ಗ್ರಾಮ ಪಂಚಾಯ್ತಿ ಸದಸ್ಯ ಲಕ್ಷ್ಮೀಶ ಗೌಡ ಬೇಸರ ವ್ಯಕ್ತಪಡಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.