ADVERTISEMENT

‘ಸಮಚಿತ್ತದಿಂದ ಸಾಮಾನ್ಯ ಮಹಾತ್ಮನಾಗಬಲ್ಲ’

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 16:29 IST
Last Updated 8 ಸೆಪ್ಟೆಂಬರ್ 2022, 16:29 IST
ಸತ್ಯನಾರಾಯಣ ಭಟ್ ಮಾಂಕಾಳೆ ರಚಿಸಿದ ‘ಜೇನು ಪ್ರಪಂಚ’ ಕೃತಿಯನ್ನು ರಾಘವೇಶ್ವರ ಭಾರತಿ ಸ್ವಾಮೀಜಿ ಗೋಕರ್ಣದಲ್ಲಿ ಗುರುವಾರ ಬಿಡುಗಡೆ ಮಾಡಿದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಹಿರಿಯ ದೈವಜ್ಞ ಪ್ರಸನ್ನ ಭಟ್ ಕೊಪ್ಪ, ಕಮಲಾ ಪ್ರಭಾಕರ ಭಟ್ ಇದ್ದಾರೆ

ಕಾರವಾರ: ‘ಕಷ್ಟಕಾಲದಲ್ಲಿ ಸಮಚಿತ್ತ ಅಥವಾ ಸ್ಥಿರ ಚಿತ್ತವೇ ನಮಗೆ ನೆರವಿಗೆ ಬರುತ್ತದೆ. ಎಂಥ ದುಃಖ, ಕಷ್ಟ ಬಂದರೂ ಗಟ್ಟಿಯಾಗಿ ಎದುರಿಸಬೇಕು. ಇಂದು ಸಾಮಾನ್ಯನನ್ನೂ ಮಹಾತ್ಮನನ್ನಾಗಿ ಮಾಡಬಲ್ಲದು’ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು.

ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಗುರುವಾರ ನಡೆದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.

‘ಹಿಗ್ಗು– ಕುಗ್ಗುಗಳಲ್ಲಿ ವಿಚಲಿತರಾಗಬಾರದು. ಸುಖ ಬಂದಾಗ ಹಿಗ್ಗುವುದು ಹಾಗೂ ದುಃಖ ಬಂದಾಗ ಕುಗ್ಗುವುದು ನಮ್ಮ ಸಹಜ ಗುಣ. ಸುಖ ಬಂದಾಗ ಅಥವಾ ಕಷ್ಟಬಂದಾಗ ಇದು ಹೀಗೇ ಇರದು ಎಂಬ ಭಾವನೆ ನಮ್ಮಲ್ಲಿರಬೇಕು’ ಎಂದರು.

ADVERTISEMENT

ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಇದ್ದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ,ಹಿರಿಯ ದೈವಜ್ಞ ಪ್ರಸನ್ನ ಭಟ್ ಕೊಪ್ಪ, ಕಮಲಾ ಪ್ರಭಾಕರ ಭಟ್ ಸ್ವಾಮೀಜಿ ಆಶೀರ್ವಾದ ಪಡೆದರು. ಸತ್ಯನಾರಾಯಣ ಭಟ್ ಮಾಂಕಾಳೆ ರಚಿಸಿದ ‘ಜೇನು ಪ್ರಪಂಚ’ ಕೃತಿಯನ್ನು ಇದೇವೇಳೆ ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.