ADVERTISEMENT

ಹಳಿಯಾಳ: ಸೂರ್ಯನಾರಾಯಣ ದೇವಸ್ಥಾನ ಜಾತ್ರೆ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 7:13 IST
Last Updated 15 ಫೆಬ್ರುವರಿ 2026, 7:13 IST
ಹಳಿಯಾಳ ತಾಲ್ಲೂಕಿನ ಮುಂಡಕಿ ಅರ್ಲವಾಡ ಗ್ರಾಮದಲ್ಲಿ ನಿರ್ಮಿಸಲಾದ ಸೂರ್ಯನಾರಾಯಣ ದೇವಸ್ಥಾನ ಜಾತ್ರಾ ಮಹೋತ್ಸವಕ್ಕೆ ಸಜ್ಜುಗೊಂಡಿರುವುದು
ಹಳಿಯಾಳ ತಾಲ್ಲೂಕಿನ ಮುಂಡಕಿ ಅರ್ಲವಾಡ ಗ್ರಾಮದಲ್ಲಿ ನಿರ್ಮಿಸಲಾದ ಸೂರ್ಯನಾರಾಯಣ ದೇವಸ್ಥಾನ ಜಾತ್ರಾ ಮಹೋತ್ಸವಕ್ಕೆ ಸಜ್ಜುಗೊಂಡಿರುವುದು   

ಹಳಿಯಾಳ: ತಾಲ್ಲೂಕಿನ ಮುಂಡಕಿ ಅರ್ಲವಾಡ ಗ್ರಾಮದಲ್ಲಿನ ಜೀರ್ಣೋದ್ಧಾರಗೊಂಡ ಸೂರ್ಯನಾರಾಯಣ ದೇವಸ್ಥಾನದ ಜಾತ್ರಾ ಮಹೋತ್ಸವ ಫೆ.15ರಿಂದ 19ರವರೆಗೆ ನಡೆಯಲಿದೆ.

ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾದ ಸೂರ್ಯನಾರಾಯಣ ವಿಗ್ರಹವು ವಿಷ್ಣುವಿನ ಅವತಾರದಲ್ಲಿದ್ದರೂ ಕೆಳಭಾಗದಲ್ಲಿ ಈಶ್ವರ ಲಿಂಗದ ಜಗಲಿಯನ್ನು ಹೊಂದಿದೆ. ಕದಂಬರ ಕಾಲದಲ್ಲಿನ ಸೂಕ್ಷ್ಮ ಕೆತ್ತನೆಯ ವಾಸ್ತುಶಿಲ್ಪ ಇಂದಿಗೂ ಗತವೈಭವವನ್ನು ಸಾರುವಂತೆ ತೋರುತ್ತಿದೆ. ಅಂದಾಜು ₹1.50 ಕೋಟಿ ವೆಚ್ಚದಲ್ಲಿ ದೇವಸ್ಥಾನದ ಹೊಸ ಕಟ್ಟಡ ನಿರ್ಮಾಣಗೊಂಡಿದೆ.

ಜಾತ್ರೆ ಅಂಗವಾಗಿ ಫೆ.15 ರಂದು ಬೆಳಿಗ್ಗೆ ದೇವರಿಗೆ ರುದ್ರಾಭಿಷೇಕ ನಡೆಯಲಿದೆ. ಬಳಿಕ ವಿವಿಧ ಧಾರ್ಮಿಕ ಕಾ್ಯಕ್ರಮಗಳು ನಡೆಯಲಿದೆ. 19 ರಂದು ಮಧ್ಯಾಹ್ನ 3 ಗಂಟೆಗೆ ಲಾಲ ಮತ್ತಿಯ ಮೇಲೆ ಜಂಗಿ ನಿಕಾಲಿ ಕುಸ್ತಿ ಹಾಗೂ ಸಾಯಂಕಾಲ 7 ಗಂಟೆಯ ನಂತರ ಸ್ನೇಹಾ ಮೆಲೋಡಿಸ್‌ ಅರುಣ ಗೊಂದಳಿ ತಂಡದಿಂದ ಸಂಗೀತ ಸಂಜೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.