
ಹಳಿಯಾಳ: ಇಲ್ಲಿನ ಕರ್ನಾಟಕ ಲಾ ಸೊಸಾಯಿಟಿಯ ವಿಶ್ವನಾಥ ರಾವ್ ದೇಶಪಾಂಡೆ ತಾತ್ರಿಕ ವಿದ್ಯಾಲಯದಲ್ಲಿ (ಕೆಎಲ್‌ಎಸ್‌ವಿಡಿಐಟಿ) ಸಿಬ್ಬಂದಿ ದಿನದ ಅಂಗವಾಗಿ ವಿವಿಧ ಸ್ಪರ್ಧಾ ಮತ್ತು ಮನೋರಂಜನೆ ಕಾರ್ಯಕ್ರಮಗಳನ್ನು ಇತ್ತೀಚಿಗೆ ಆಯೋಜಿಸಲಾಗಿತ್ತು.
ಸಿಬ್ಬಂದಿಗಾಗಿ ಕ್ರಿಕೆಟ್, ಹಗ್ಗ ಜಗ್ಗಾಟ, ಸ್ಲೋ ಸೈಕಲಿಂಗ್, ಕೇರಂ, ಸ್ಕೀವಿಡ್ ಗೇಮ್, ಚೆಸ್, ಟೇಬಲ್ ಟೆನ್ನಿಸ್ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಮಹಿಳೆಯರ ಹಗ್ಗ ಜಗ್ಗುವ ಸ್ಪರ್ಧೆಯಲ್ಲಿ ಡಾ.ಪೂರ್ಣಿಮಾ ರಾಯ್ಕರ ತಂಡ ಪ್ರಥಮ, ಪ್ರೊ. ವಿಜಯಲಕ್ಷ್ಮಿ ತಂಡ ದ್ವಿತೀಯ, ಕ್ರಿಕೆಟ್ ನಲ್ಲಿ ಶೋಭಾ ಚವ್ಹಾಣ ತಂಡ ಪ್ರಥಮ ಹಾಗೂ ಪ್ರೊ. ಜ್ಯೋತಿ ಕಮ್ಮಾರ ತಂಡ ದ್ವಿತೀಯ ಸ್ಥಾನ ಗಳಿಸಿದರು. ಪುರುಷರ ಹಗ್ಗ ಜಗ್ಗಾಟದಲ್ಲಿ ಇ ಆಂಡ್ ಸಿ ವಿಭಾಗದ ಪ್ರೊ.ದೀಪಕ ಶರ್ಮಾ ತಂಡ ಪ್ರಥಮ, ವಿನಾಯಕ ಪುರೋಹಿತ ರವರ ಚಾಲಕರ ತಂಡ ದ್ವಿತೀಯ, ಕ್ರಿಕೆಟ್ ನಲ್ಲಿ ಮಂಜುನಾಥ ಹೆಚ್ ತಂಡ ಪ್ರಥಮ ಹಾಗೂ ಡಾ. ಮಹೇಂದ್ರ ದೀಕ್ಷಿತ ತಂಡ ದ್ವಿತೀಯ ಸ್ಥಾನ ಪಡೆಯಿತು. ಚೆಸ್ ನಲ್ಲಿ ಪ್ರೊ. ಎಸ್ ಜಿ ಹಿರೇಮಠ ಪ್ರಥಮ, ವಿಠ್ಠಲ ಕೆ ದ್ವಿತೀಯ ಸ್ಥಾನ ಪಡೆದರು. ಕೇರಂನಲ್ಲಿ ಮಂಜುನಾಥ ಹೆಚ್, ಅನಿಲ್ ತಂಡ ಪ್ರಥಮ ಹಾಗೂ ಮಂಜುನಾಥ ಕೆ ಮತ್ತು ತಾನಾಜಿ ತಂಡ ದ್ವಿತೀಯ ಸ್ಥಾನ ಪಡೆದರು.
ಪುರುಷರ ಸ್ಲೋ ಸೈಕಲಿಂಗ್ ನಲ್ಲಿ ಕಾರ್ತೀಕ ಕೆ ಪ್ರಥಮ ಹಾಗೂ ಪ್ರೊ.ದೀಪಕ ಶರ್ಮಾ ದ್ವಿತೀಯ, ಮಹಿಳಾ ವಿಭಾಗದಲ್ಲಿ ಪ್ರೊ. ಪವಿತ್ರಾ ಬಿ ಪ್ರಥಮ, ಜ್ಯೋತಿ ಕೆ ದ್ವಿತೀಯ ಸ್ಥಾನ ಪಡೆದರು. ಟೇಬಲ್ ಟೆನ್ನಿಸ್ ನಲ್ಲಿ ಡಾ. ಮಹೇಂದ್ರ ದೀಕ್ಷಿತ ಪ್ರಥಮ, ಡಾ. ಸಮೀರ ಗಲಗಲಿ ದ್ವಿತೀಯ, ಪ್ರೊ. ಪವಿತ್ರಾ ಬಿ ಪ್ರಥಮ ಹಾಗೂ ಶೋಭಾ ಚವ್ಹಾಣ ದ್ವಿತೀಯ ಸ್ಥಾನ ಪಡೆದರು. ಸ್ಕೀವಿಡ್ ಗೇಮ್ ಪುರುಷರ ವಿಭಾಗದಲ್ಲಿ ಇ ಆಂಡ್ ಇ ವಿಭಾಗದ ಪ್ರೊ. ಪ್ರಕಾಶ ಚವ್ಹಾಣ ತಂಡ ಪ್ರಥಮ, ಕಂಪ್ಯೂಟರ್ ಸೈನ್ಸ್ ನ ಪ್ರೊ. ವಿಜೇತ ಸ್ವಾದಿ ತಂಡ ದ್ವಿತೀಯ ಸ್ಥಾನ ಪಡೆದರು. ಮಹಿಳಾ ವಿಭಾಗದಲ್ಲಿ ಶೋಭಾ ಚವ್ಹಾಣ ತಂಡ ಪ್ರಥಮ ಹಾಗೂ ಪ್ರೊ. ನಿರ್ಮಲಾ ಜಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡರು. ಸ್ಪರ್ಧಾ ವಿಜೇತರಿಗೆ ಪ್ರಾಚಾರ್ಯ ಡಾ ವಿ ಎ ಕುಲಕರ್ಣಿ ಬಹುಮಾನ ವಿತರಿಸಿದರು.
ಡಾ.ಶಂಕರ್ ಬಡಿಗೇರ್ ಮತ್ತು ಹಿರಿಯ ಪ್ರಾಧ್ಯಾಪಕ ಡಾ.ವಿ.ಎಸ್ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ, ಸಂಶೋಧನೆ ಹಾಗೂ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಉತ್ತಮ ಪ್ರದರ್ಶನ ತೋರಿದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗಕ್ಕೆ ಅತ್ತ್ಯುತ್ತಮ ವಿಭಾಗ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಕೆ.ಎಸ್.ಪೂಜಾರ್ ಕಾರ್ಯಕ್ರಮ ಸಂಯೋಜಿಸಿದ್ದರು.
ಭೋಜನೋತ್ಸವ: ಕ್ರೀಡಾ ಸ್ವರ್ಧೆಯ ನಂತರ ಭೋಜನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮಹಾವಿದ್ಯಾಲಯದ ವಿವಿಧ ವಿಭಾಗದ ಸಿಬ್ಬಂದಿಗಳು ರುಚಿಕರ ಖಾದ್ಯ ತಯಾರಿಸಿ ಗಮನ ಸೆಳೆದರು. ಸಿಬ್ಬಂದಿ ಮತ್ತು ಅವರ ಪರಿವಾರದ ಸದಸ್ಯರು ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.