ADVERTISEMENT

ಎಸ್ಟಿ ಮಾನ್ಯತೆಗೆ ಆಗ್ರಹಿಸಿ ಪ್ರತಿಭಟನೆ ನಾಳೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 15:30 IST
Last Updated 23 ಜನವರಿ 2023, 15:30 IST
ವಿನಾಯಕ ಗೌಡ
ವಿನಾಯಕ ಗೌಡ   

ಕಾರವಾರ: ‘ಹಾಲಕ್ಕಿ ಒಕ್ಕಲಿಗ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಆಗ್ರಹಿಸಿ ಜ.25 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಹಮ್ಮಿಕೊಳ್ಳಲಾಗುವುದು’ ಎಂದು ಕುಮಟಾದ ಹಾಲಕ್ಕಿ ಸಮಾಜದ ಪ್ರಮುಖ ವಿನಾಯಕ ಗೌಡ ಹೇಳಿದರು.

‘ಪದಶ್ರೀ ಪುರಸ್ಕೃತರಾದ ಸುಕ್ರಿ ಬೊಮ್ಮಗೌಡ ಹಾಗೂ ತುಳಸಿ ಗೌಡ ನೇತೃತ್ವದಲ್ಲಿ ಧರಣಿ ನಡೆಯಲಿದೆ. ಹಾಲಕ್ಕಿ ಸಮುದಾಯದ ಜತೆಗೆ ಇತರ ಸಮುದಾಯಗಳ ಪ್ರಮುಖರನ್ನೂ ಬೆಂಬಲಿಸುವಂತೆ ಕೋರಿದ್ದೇವೆ’ ಎಂದು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಹಾಲಕ್ಕಿ ಒಕ್ಕಲು ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕು. ವಿವಿಧ ಅಭಿವೃದ್ಧಿ ಯೋಜನೆಗೆ ನಿರಾಶ್ರಿತರಾದವರಿಗೆ ಉದ್ಯೋಗದ ಜತೆಗೆ ಸೂಕ್ತ ಪರಿಹಾರ ನೀಡಬೇಕು ಎಂಬ ಬೇಡಿಕೆ ಈಡೇರಿಸಬೇಕು. ಗಂಗಾವಳಿ ನದಿಗೆ ಕಿಂಡಿ ಅಣೆಕಟ್ಟು ನಿರ್ಮಾಣ ಯೋಜನೆ, ಕುಮಟಾ ಬೈಪಾಸ್ ಯೋಜನೆ ಕೈಬಿಡುವಂತೆಯೂ ಆಗ್ರಹಿಸಲಾಗುವುದು’ ಎಂದರು.

ADVERTISEMENT

‘ಹಾಲಕ್ಕಿಗಳ ಸಂಪ್ರದಾಯ ಸುಗ್ಗಿ ಕುಣಿತದ ಕಲಾವಿದರಿಗೆ ಮಾಸಾಶನ ನೀಡಬೇಕು. ಹಾಲಕ್ಕಿಗಳ ಪರಂಪರಾಗತ ಸೀಮೆ ಗೌಡರಿಗೆ ಹಾಗೂ ಊರ ಗೌಡರಿಗೆ ಮಾಸಾಶನ ನೀಡಬೇಕು ಎಂಬ ಬೇಡಿಕೆ ಪಟ್ಟಿಗಳನ್ನು ಮುಂದಿಟ್ಟು ಹೋರಾಟ ನಡೆಸಲಿದ್ದೇವೆ’ ಎಂದು ತಿಳಿಸಿದರು‌.

ಮಾರುತಿ ಗೌಡ, ಡಿಂಗಾ ಗೌಡ, ಅರುಣ ಗೌಡ, ಮೋಹನದಾಸ ಗೌಡ, ಗಣೇಶ ಗೌಡ, ರಮಾಕಾಂತ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.